ಡಿಫರೆಂಟ್ ಪ್ರೇಮ್ ಕಹಾನಿ: ಪತ್ನಿ, ಪ್ರೇಯಸಿ ಕೈ ಬಿಟ್ಟು ಕುಟುಂಬ ಕಲಹ ಬಿಡಿಸೋಕೆ ಬಂದವಳ ಕೈ ಹಿಡಿದ ಯೋಧ!
ಬೆಳಗಾವಿ: ಮಾಜಿ ಸಿಆರಪಿಎಫ್ ಯೋಧನೊಬ್ಬ ಪತ್ನಿ ಹಾಗೂ ಪ್ರೇಯಸಿಗೆ ಕೈಕೊಟ್ಟು ಇನ್ನೊಬ್ಬಳನ್ನು ವಿವಾಹವಾಗಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾದ ಮೊದಲ ಪತ್ನಿಗೆ ಮೋಸ ಮಾಡಿ ಮತ್ತೊಬ್ಬಳನ್ನು ವಿವಾಹವಾಗಿದ್ದ ಅಜಿತ್ ಮಾದರ್ (40) ಆಕೆಗೆ ಸಹ ವಂಚಿಸಿ ಮತ್ತೆ ಮೂರನೇ ವಿವಾಹವಾಗಿದ್ದಾನೆ.ಮೂಲತಃ ಬಾಗಲಕೋಟೆಯ ಮದರಕಂಡಿ ಗ್ರಾಮದವನಾದ ಅಜಿತ್ ಗಂಡ-ಹೆಂಡತಿ ಜಗಳ ಬಿಡಿಸ ಬಂದಿದ್ದ ಸಮಾಜ ಸೇವಕಿಯನ್ನೇ ವಿವಾಹವಾಗಿದ್ದಾನೆ ಎನ್ನುವ ಸಂಗತಿ ವಿಚಿತ್ರವಾಗಿದ್ದರೂ ಸತ್ಯ!
ಸಿಆರಪಿಎಫ್ ಯೋಧನಾಗಿದ್ದ ಅಜಿತ್ 2011ರಲ್ಲಿ ದ್ರಾಕ್ಷಾಯಿಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ಅವರಿಗೆ ಇಬ್ಬರು ಮಕ್ಕಳೂ ಇದ್ದರು ಆದರೆ ಕೆಲಸದ ಮೇಲೆ ಬಿಹಾರಕ್ಕೆ ತೆರಳಿದ್ದ ಸಮಯದಲ್ಲಿ ಅಜಿತ್ ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸೀಮಾ ಎಂಬ ವಿವಾಹಿತ ಸ್ತ್ರೀ ಜತೆ ಪ್ರೇಮ ಸಂಬಂಧ ಬೆಳಿಸಿ ಆಕೆಯನ್ನು ವಿವಾಹವಾಗಿದ್ದ.
ಈ ವಿವಾಹದ ವಿಷಯ ತಿಳಿದ ದ್ರಾಕ್ಷಾಯಿಣಿ ಪತಿ ವಿರುದ್ಧ ಸಿಆರಪಿಎಫ್ ಕಮಾಂಡರ್ ಗೆ ದೂರಿತ್ತಿದ್ದಳು. ಆಗ ಕಮಾಂಡರ್ ಅಜಿತ್ ತನ್ನ ಕುಟುಂಬ ಸಮಸ್ಯೆ ಪರಿಆರ ಮಾಡಿಕೊಂಡು ಬರುವಂತೆ ಹೇಳಿ 15 ದಿನಗಳ ಕಾಲ ರಜೆ ನೀಡಿದ್ದಾರೆ.
ಹಾಗೆ ರಜೆ ಮೇಲೆ ಊರಿಗೆ ಬಂದಿದ್ದ ಅಜಿತ್ ಜೆಡಿಎಸ್ ಕಿತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಸೂರ್ಯವಂ ಎಂಬಾಕೆಯ ಬಳಿ ಹೋಗಿ ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸುವಂತೆ ಕೇಳಿದ್ದಾನೆ.ಹೀಗೆ ಸಮಸ್ಯೆ ನಿವಾರಿಸಲು ಆಗಮಿಸಿದ್ದ ಜಯಶ್ರೀಗೆ ಅಜಿತ್ ಮೇಲೆ ಪ್ರೇಮವಾಗಿದ್ದು ಇಬ್ಬರೂ 2018ರಲ್ಲಿ ರಿಜಿಸ್ಟರ್ ವಿವಾಹವಾಗಿದ್ದರು.ಅಜಿತ್ ಮೇಲೆ ಎಪಿಎಂಸಿ ಮತ್ತು ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದವು.
ಈ ವೇಳೆ ಅಜಿತ್ ಮೊದಲ ಪತ್ನಿ ದ್ರಾಕ್ಷಾಯಿಣಿ ಜಯಶ್ರೀ ಸೂರ್ಯವಂಶಿ ನನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ.ಹಾಗೆಯೇ ನನಗೆ ನ್ಯಾಯ ಕೊಡಿಸಿ ಎಂದು ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ ಆದರೆ ಇನ್ನೂ ನ್ಯಾಯ ಸಿಕ್ಕದ ಕಾರಣ ಲೀಸ್ ಕಮೀಷನರಗೆ ಸಹ ದೂರಿದ್ದಾಳೆ. ಇದೀಗ ಆರೋಪಿ ಮೂವರು ಪತ್ನಿಯರ ಗಂಡ ಅಜಿತ್ ಪರಾರಿಯಾಗಿದ್ದು ಸಮಾಜ ಸೇವಕಿ ಜಯಶ್ರೀ ನಡೆಯಿಂದ ಸೀಮಾ ಹಾಗೂ ದ್ರಾಕ್ಷಾಯಿಣಿ ಬದುಕು ಮೂರಾಬಟ್ಟೆಯಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos