ರಾಜ್ಯ

ಮೈಸೂರಿನ ಎನ್ಐಇ ಅಭಿವೃದ್ದಿಗೆ ಇನ್ಫೋಸಿಸ್ ನಾರಾಯಣಮೂರ್ತಿ ಒಲವು

Raghavendra Adiga
ಬೆಂಗಳೂರು: ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಭಿವೃದ್ದಿ ಕುರಿತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರೊಡನೆ ಗುರುವಾರ ಚರ್ಚೆ ನಡೆಸಿದ್ದಾರೆ. ಇನ್ಸ್ಟಿಟ್ಯೂಷನ್ ಅನ್ನು ಅಂತರಾಷ್ತ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವ ಕುರಿತು ಮಾತುಕತೆ ನಡೆದಿದೆ.
"ಎಲ್ಲವನ್ನೂ ಖಾಸಗಿಯಾಗಿ ಮಾಡಲಾಗುತ್ತಿದ್ದು ಇದರಲ್ಲಿ ಸರ್ಕಾರದ ಹಣದ ಹುಡಿಕೆ ಇರಲಾರದು. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನಕ್ಕೆ ಬರಲಾಗುತ್ತದೆ." ಪರಮೇಶ್ವರ ಹೇಳಿದ್ದಾರೆ.
ನಾರಾಯಣ ಮೂರ್ತಿ ಪ್ರಪಂಚದ ಅಗ್ರ 15 ವಿಶ್ವವಿದ್ಯಾನಿಲಯಗಳಿಗೆ ಸಮಾನವಾದ ಜಾಗತಿಕ ಹೆಸರಾಂತ ಸಂಸ್ಥೆಯನ್ನಾಗಿ ಇನ್ಸ್ಟಿಟ್ಯೂಟ್ ಅನ್ನು ಅಭಿವೃದ್ದಿಪಡಿಸಲು ಬಯಸುತ್ತಿದ್ದಾರೆ. ಈ ಇನ್ಸ್ಟಿಟ್ಯೂಟ್ ಭಾರತದ ಶೈಕ್ಷಣಿಕ ನಕಾಶೆಯನ್ನೇ ಬದಲಿಸಲಿದೆ.ಈ ಮೂಲಕ ವಿದ್ಯಾರ್ಥಿಗಳಿಗೆ ಅವರ ಜ್ಞಾನದ ಮಾರ್ಗ ತೆರೆದುಕೊಳ್ಳುತ್ತದೆ.ಸರ್ ಸಿವಿ ರಾಮನ್, ಸತ್ಯೇಂದ್ರನಾಥ್ ಬೋಸ್ ಸೇರಿ ಅನೇಕ ಮಹನೀರಂತಹಾ  ಶ್ರೇಷ್ಠ ಸಂಶೋಧಕರನ್ನು ರೂಪಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ನಾರಾಯಣಮೂರ್ತಿ ಭಾವಿಸಿದ್ದಾರೆ.
SCROLL FOR NEXT