ರಾಜ್ಯ

ವಿಜಯಪುರ: ಹನಿಟ್ರ್ಯಾಪ್ ಮೂಲಕ ಉದ್ಯಮಿಗೆ ವಂಚನೆ, ಮಹಿಳೆ ಸೇರಿ ಮೂವರ ಬಂಧನ

Raghavendra Adiga
ವಿಜಯಪುರ: ಹನಿಟ್ರ್ಯಾಪ್ ಮಾಡಿ ಉದ್ಯಮಿಯೊಬ್ಬರಿಗೆ ವಂಚಿಸಿದ್ದ ಮೂವರನ್ನು ವಿಜಯಪುರ ಪೋಲೀಸರು ಬಂಧಿಸಿದ್ದಾರೆ. 
ಬೆಳಗಾವಿ ಮೂಲದ ಮಹಿಳೆಯೂ ಸೇರಿ ಮೂವರು ಆರೋಪಿಗಳನ್ನು ವಿಜಯಪುರ, ಇಂಡಿಯ ಪೋಲೀಸರು ಬಂಧಿಸಿದ್ದಾರೆ. ಇಂಡಿಯ ವಿಠ್ಠಲ ವಡ್ಡರ, ಮುರುಗೇಶ ಉಳ್ಳಾಗಡ್ಡಿ ಎಂಬುವವರು ಬಂಧಿರ್ತರಾಗಿದ್ದು ಇವರು ಫೇಸ್‍ಬುಕ್  ಮೂಲಕ ಉದ್ಯಮಿಯ ಸ್ನೇಹ ಬೆಳೆಸಿ ದೂರವಾಣಿ ಸಂಖ್ಯೆ ಪಡೆದಿದ್ದು ಹನಿಟ್ರ್ಯಾಪ್ ಮೂಲಕ ಅವರನ್ನು ವಂಚಿಸಿದ್ದರು ಎಂದು ಪೋಲೀಸರು ಹೇಳಿದ್ದಾರೆ.
ಘಟನೆ ಹಿನ್ನೆಲೆ
ವಿಜಯಪುರದ ಉದ್ಯಮಿ ಸುನೀಲ್ ಪಾಟೀಲ್ ಎಂಬ ವ್ಯಕ್ತಿ ವಂಚನೆಗೊಳಗಾದ ನತದೃಷ್ತರು. ಫೇಸ್‍ಬುಕ್ ಮುಖೇನ ಸ್ನೇಹ ಬೆಳೆಸಿದ್ದ ಆರೊಪಿಗಳು ಉದ್ಯಮಿಯನ್ನು ಇಂಡಿಯ ತಮ್ಮ ಸ್ನೇಹಿತೆಯ ಬ್ಯೂಟಿ ಪಾರ್ಲರ್ ಗೆ ಕರೆದು ಅಲ್ಲಿ ಅವರಿಗೆ ಧಮ್ಕಿ ಹಾಕಿದ್ದಾರೆ.
"ನಾವು ಟಿವಿ ಚಾನಲ್ ಗೆ ಸೇರಿದವರು. ನಿನ್ನ ವೀಡಿಯೋ ದೃಶ್ಯಗಳನ್ನು ಟಿವಿಲಿ ಪ್ರಸಾರ ಮಾಡುವೆವು." ಎಂದು ಬೆದರಿಸಿ ಉದ್ಯಮಿಯ ಬಳಿ 24 ಸಾವಿರ ನಗದು, ಚಿನ್ನದ ಚೈನ್ ಹಾಗೂ ಚಿನ್ನದ ಕಡಗ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.ಡಿಸೆಂಬರ್ 18ರಂದು ಈ ಘಟನೆ ನಡೆದಿದ್ದು ಉದ್ಯಮಿ ಡಿಸೆಂಬರ್ 22ರಂದು ಇಂಡಿ ಪೋಲೀಸರಿಗೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ಪೋಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಲಿಂಗರಾಜ ಹುಡುಕಾಟ ನಡೆಸಿದ್ದಾರೆ.
SCROLL FOR NEXT