ನಾಯಕ್ ಎಂ. ಸಾದಿಕ್ 
ರಾಜ್ಯ

ತುಮಕೂರು ಯೋಧನಿಗೆ ಗಣರಾಜ್ಯೋತ್ಸವ ಶೌರ್ಯ ಪ್ರಶಸ್ತಿ

ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ತುಮಕೂರಿನ ನಾಯಕ್ ಎಂ. ಸಾದಿಕ್ 70ನೇ ಗಣರಾಜ್ಯೋತ್ಸವದಲ್ಲಿ ಶೌರ್ಯ ಪ್ರಶಸ್ತಿಗೆ ...

ತುಮಕೂರು: ಜಮ್ಮು-ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಾರತೀಯ ಸೇನೆಯಲ್ಲಿರುವ ತುಮಕೂರಿನ ಎಂ. ಸಾದಿಕ್ 70ನೇ ಗಣರಾಜ್ಯೋತ್ಸವದಲ್ಲಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತುಮಕೂರಿನ ಪೂರ್​ಹೌಸ್ ಕಾಲೋನಿ ನಿವಾಸಿ ಎಂ. ಸಾದಿಕ್ 2004ರಲ್ಲಿ ಭಾರತೀಯ ಸೇನೆ ಸೇರಿದ್ದು, ಸದ್ಯ ಕಾಶ್ಮೀರದ ಕುಲ್ಗಾಮ್ಲ್ಲಿ ರಾಷ್ಟ್ರೀಯ ರೈಫಲ್ಸ್ 1ನೇ ಬೆಟಾಲಿಯನ್​ನಲ್ಲಿದ್ದಾರೆ.
ಸಾದಿಕ್ ತುರುವೇಕೆರೆ ತಾಲೂಕಿನ ಅಮ್ಮಸಂದ್ರದವರು. ತಂದೆ ದಿ.ಮೊಹಮ್ಮದ್ ಸಲೀಂ, ತಾಯಿ ಸಿರಾಜುನ್ನೀಸಾ. 10 ವರ್ಷಗಳ ಹಿಂದೆಯೇ ಕುಟುಂಬ ತುಮಕೂರಿಗೆ ಬಂದು ನೆಲೆಸಿದ್ದಾರೆ.
ಕಳೆದ ಅಕ್ಟೋಬರ್​ನಲ್ಲಿ ಮೂವರು ಉಗ್ರರ ಎನ್​ಕೌಂಟರ್ ಮಾಡಿದ್ದಕ್ಕೆ ಸಾದಿಕ್ ಶೌರ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಎನ್​ಎಸ್​ಜಿ ಪಡೆ, ದಕ್ಷಿಣಾ ಆಫ್ರಿಕಾದ ಸೂಡಾನ್​ಗೆ ತೆರಳಿದ್ದ ವಿಶ್ವಸಂಸ್ಥೆ ಶಾಂತಿ ಸೇನೆಯಲ್ಲೂ ಸಾದಿಕ್ ಇದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

SCROLL FOR NEXT