ರಾಜ್ಯ

ಮಹಿಳಾ ಬಾಸ್ ಗಳಿಗೆ ಪ್ರಾಯೋಗಿಕ ಜ್ಞಾನ ಇರೋದಿಲ್ಲ ಅಂತ ಪುರುಷರು ಭಾವಿಸುತ್ತಾರೆ: ಡಿ ರೂಪಾ

Lingaraj Badiger
ಬೆಂಗಳೂರು: ಮಹಿಳೆಯರು ವೃತ್ತಿಪರವಾಗಿ ತಮ್ಮನ್ನು ತಾವು ಸಾಬೀತುಪಡಿಸಲು ಶ್ರಮ ವಹಿಸಿ ದುಪ್ಪಟ್ಟು ಕೆಲಸ ಮಾಡಬೇಕು ಎಂದು ಹೋಮ್ ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ಮಹಾ ನಿರ್ದೇಶಕಿ ಡಿ ರೂಪಾ ಅವರು ಹೇಳಿದ್ದಾರೆ.
ಐಐಎಂ-ಬಿಯಲ್ಲಿ ನಡೆದ ಐದನೇ ಮಹಿಳಾ ನಾಯಕತ್ವ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ರೂಪಾ ಅವರು, ಮಹಿಳಾ ಬಾಸ್ ಗಳಿಗೆ ಪ್ರಾಯೋಗಿಕ ಜ್ಞಾನ ಇರೋದಿಲ್ಲ ಅಂತ ಪುರುಷರು ಭಾವಿಸುತ್ತಾರೆ. ಮಹಿಳೆಯರು ಹೆಚ್ಚು ತಿರುಗಾಡುವುದಿಲ್ಲ. ಆದರೆ ಗಂಡು ಮಕ್ಕಳಿಗೆ ತಿರುಗಾಟದ ಅನುಭವ ಇರುತ್ತದೆ ಎಂದು ಭಾವಿಸುತ್ತಾರೆ ಎಂದರು.
ಈ ಹಿಂದೆ ತಾವು ಸಶಸ್ತ್ರ ಪಡೆಗಳ ಎಸಿಪಿಯಾಗಿದ್ದಾಗ ತೆಗೆದುಕೊಂಡ ಕಠಿಣ ಕ್ರಮಗಳನ್ನು ನೆನಪಿಸಿಕೊಂಡ ರೂಪಾ, 85 ರಾಜಕಾರಣಿಗಳಿಂದ 255 ಅನಧಿಕೃತ ಗನ್ ಮ್ಯಾನ್ ಗಳನ್ನು ವಾಪಸ್ ಪಡೆದಿದ್ದೆ ಎಂದರು.
ಐಪಿಎಸ್ ಅಧಿಕಾರಿ ರೂಪಾ ಅವರು 2017ರಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತ ಗೆಳತಿ ಶಶಿಕಲಾ ಮತ್ತು ಸಹಚರರಿಗೆ ಐಷಾರಾಮಿ ವ್ಯವಸ್ಥೆ ಮಾಡಿಕೊಡಲಾಗಿದೆ, ಅದರಲ್ಲಿ ಜೈಲಿನ ಹಿರಿಯ ಅಧಿಕಾರಿಗಳ ಸಹಭಾಗಿತ್ವವೂ ಇದೆ ಎಂದು ವರದಿ ನೀಡಿದ್ದರು.
SCROLL FOR NEXT