ರಾಜ್ಯ

ಬಾಗಲಕೋಟೆ: ನಿಷೇಧಿತ ನೊಟುಗಳ ವಿನಿಮಯ ನಡೆಸುತ್ತಿದ್ದ 7 ಜನರ ಬಂಧನ

Raghavendra Adiga
ಬಾಗಲಕೋಟೆ: ಹಳೆಯ ನಿಷೇಧಿತ ನೋಟನ್ನು ಕಮಿಷನ್ ಪಡೆದು ಹೊಸ ಕರೆನ್ಸಿ ನೋಟುಗಳಿಗೆ ಬದಲಾಯಿಸಿಕೊಡುವ ದಂಧೆಯಲ್ಲಿ ನಿರತವಾಗಿದ್ದ ಎಂಟು ಜನರ ಗ್ಯಾಂಗ್ ಅನ್ನು ಬಾಗಲಕೋಟೆ ಪೋಲೀಸರು ಪತ್ತೆಹಚ್ಚಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ ಗ್ಯಾಂಗ್ ನ ಏಳು ಜನರನ್ನು ಸೆರೆ ಹಿಡಿರಿರುವ ಪೋಲೀಸರು ಕಿಂಗ್ ಪಿನ್ ಆರೋಪಿಗಾಗಿ ಶೋಧ ಮುಂದುವರಿಸಿದ್ದಾರೆ.
ಬಂಧಿತರಿಂದ 29.4 ಲಕ್ಷ ರೂ ನಿಷೇಧಿತ ನೋಟುಗಳನ್ನು ವಶಕ್ಕೆ ಪಡೆಯಲಾಗಿದ್ದು ಇದರಲ್ಲಿ  22.25 ಲಕ್ಷ ರು.  1,000 ರೂನೋಟುಗಳಿದ್ದರೆ ಉಳಿದದ್ದು 500 ರು. ನೋಟಾಗಿತ್ತು.
ಖಚಿತ ಮಾಹಿತಿ ಪಡೆದ ಪೋಲೀಸರು ಮಹಲಿಂಗಪುರ ಪಟ್ಟಣದ ಮನೆಯೊಂದಕ್ಕೆ ದಾಳಿ ನಡೆಸಿ ಏಳು ಜನರನ್ನು ಬಂಧಿಸಲು ಯಶಸ್ವಿಯಾದರು.ಬಂಧಿತರನ್ನು ಶಾಂತಪ್ಪಎನ್, ಗಣಪತಿ ಎಂ.ಕೃಷ್ಣ ಪಿ., ಬಸವರಾಜ ಎಚ್., ಹುಸೇನಬ್ಬ ಎಂ., ಮುಮ್ತಾಜ್ ಪಟೇಲ್ ಹಾಗೂ ಸಂಗೀತಾ ಎಂದು ಗುರುತಿಸಲಾಗಿದೆ.
ಮಹಲಿಂಗಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬೆಳಗಾವಿಯ ವ್ಯಕ್ತಿ ಇವರೆಲ್ಲರ ನಾಯಕನಾಗಿದ್ದನೆನ್ನುವುದು ಪ್ರಾಥಮಿಕ ತನಿಖೆ ವೇಳೆ ಬಹಿರಂಗವಾಗಿದ್ದು ಆತನ ಹುಡುಕಾಟ ಮುಂದುವರಿದಿದೆ.: 
SCROLL FOR NEXT