ಸುಷ್ಮಾ ಮತ್ತು ಎಸ್ .ಕೆ ರಾಜು 
ರಾಜ್ಯ

ಬೆಂಗಳೂರು: ಜೀವಕ್ಕೆ ಎರವಾದ ಫೇಸ್ ಬುಕ್ ಮೋಹ; ಅನುಮಾನದಿಂದ ಪತ್ನಿ, 3 ತಿಂಗಳ ಮಗು ಕೊಂದ ಪತಿ!

ಫೇಸ್ ಬುಕ್ ಅವರಿಬ್ಬರನ್ನು ಹತ್ತಿರ ತಂದಿತ್ತು, ಪ್ರೀತಿಸಿ ಒಟ್ಟಾಗಿ ಬದುಕಲು ಸಹಾಯ ಮಾಡಿತ್ತು, ಆದರೆ ಅದೇ ಪ್ರೀತಿ ಇಂದು ಇಬ್ಬರ ಜೀವಕ್ಕೆ, ಜೀವನಕ್ಕೆ ಎರವಾಗಿದೆ...

ಬೆಂಗಳೂರು:  ಫೇಸ್ ಬುಕ್ ಅವರಿಬ್ಬರನ್ನು ಹತ್ತಿರ ತಂದಿತ್ತು, ಪ್ರೀತಿಸಿ ಒಟ್ಟಾಗಿ ಬದುಕಲು ಸಹಾಯ ಮಾಡಿತ್ತು, ಆದರೆ ಅದೇ  ಪ್ರೀತಿ ಇಂದು ಇಬ್ಬರ ಜೀವಕ್ಕೆ, ಜೀವನಕ್ಕೆ ಎರವಾಗಿದೆ. 
ಫೇಸ್ ಬುಕ್ ಮೂಲಕ ಪರಿಚಯವಾಗಿ, ಪರಿಚಯ ಸ್ನೇಹ, ಪ್ರೀತಿಗೆ ತಿರುಗಿ. ಇಬ್ಬರು ಜೊತೆಗೆ ವಾಸಿಸುತ್ತಿದ್ದರು.  ಆದರೆ ಪತ್ನಿಯ ಅತಿಯಾದ ಫೇಸ್ ಬುಕ್ ಮೋಹ ಆಕೆ ಮತ್ತು ಮೂರು ತಿಂಗಳ ಮಗುವಿನ ಜೀವನವನ್ನು ಕಿತ್ತುಕೊಂಡಿದೆ.
ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ  ಬಿಡದಿ ಮೂಲದ ರಾಜು ಪತ್ನಿ ಸುಷ್ಮಾ(24) ಹಾಗೂ ಮೂರು ತಿಂಗಳ ಮಗುವನ್ನು ಬಿಡದಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹೆಜ್ಜಾಲ ಸಮೀಪದ ನೀಲಗಿರಿ ನಡುತೋಪಿನಲ್ಲಿ ಕೊಂದು, ಶವಗಳನ್ನು ಪೆಟ್ರೋಲ್‌ ಸುರಿದು ಸುಟ್ಟು ಪರಾರಿಯಾಗಿದ್ದ. 
ತಲೆತಪ್ಪಿಸಿಕೊಂಡು ತಿರುಗುತ್ತಿದ್ದ ಈತನನ್ನು ಬಂಧಿಸಿದ ಪೊಲೀಸರು, ಕೋರ್ಟ್‌ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. 
ಖಾಸಗಿ ಕಂಪೆನಿಯೊಂದರ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಸ್‌.ಕೆ.ರಾಜು ವಿಗೆ ಬೆಂಗಳೂರಿನ ದೊಡ್ಡಬಿದರಕಲ್ಲು ಎಂಬಲ್ಲಿ ವಾಸವಿದ್ದ ನಿವೃತ್ತ ಸರ್ಕಾರಿ ನೌಕರರೊಬ್ಬರ ಪುತ್ರಿ ಸುಷ್ಮಾ ಜತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಇವರಿಬ್ಬರೂ ಬಾಡಿಗೆ ಮನೆಯಲ್ಲಿ ಜೊತೆಯಾಗಿ ವಾಸವಿದ್ದರು.  
ಸುಷ್ಮಾ ಫೇಸ್‌ಬುಕ್‌ ಮೇಲೆ ಅತಿಯಾದ ಮೋಹ ಬೆಳೆಸಿಕೊಂಡಿದ್ದು, ಇದೇ ವಿಷಯವಾಗಿ ಇವರಿಬ್ಬರ ನಡುವೆ ಸದಾ ಜಗಳವಾಗುತ್ತಿತ್ತು. ಸುಷ್ಮಾಳ ಬಗ್ಗೆ ಅನುಮಾನವನ್ನೂ ಹೊಂದಿದ್ದ, ಆಕೆಗೆ ಹಲವು ಮಂದಿ ಫೇಸ್ ಬುಕ್ ಸ್ನೇಹಿತರಿದ್ದಾರೆ ಎಂದು ಶಂಕಿಸಿದ್ದ ಆರೋಪಿ ರಾಜು, ಆಕೆಯನ್ನು ಹತ್ಯೆ ಮಾಡಲು ನಿರ್ಧರಿಸಿದ್ದ. 
ಕಳೆದ ಜ.20ರಂದು ಹೆಜ್ಜಾಲದಿಂದ ಮುತ್ತರಾಯನಪುರಕ್ಕೆ ಹೋಗುವ ರಸ್ತೆಯಲ್ಲಿನ ಹೆಜ್ಜಾಲ ನಡುತೋಪಿನ ನೀಲಗಿರಿ ಪ್ಲಾಂಟೇಶನ್‌ಗೆ ಸುಷ್ಮಾ ಮತ್ತು ಮಗು ಕರೆದೊಯ್ದು ಇಬ್ಬರನ್ನೂ ಕೊಲೆ ಮಾಡಿದ್ದ. ಅಷ್ಟೇ ಅಲ್ಲದೇ ಸಾಕ್ಷ್ಯಾಧಾರಗಳನ್ನು ನಾಶ ಮಾಡಲು ತಾಯಿ ಮತ್ತು ಮಗುವಿನ ಶವಗಳ ಮೇಲೆ ಪೆಟ್ರೋಲ್‌ ಸುರಿದು ಸುಟ್ಟು ಹಾಕಿ, ಪರಾರಿಯಾಗಿದ್ದ. 
ಈ ನಡುವೆ ಮಾದನಾಯ್ಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಸುಷ್ಮಾಳ ಪೋಷಕರು, ಜ.26ರಂದು ಮಗಳು ಮತ್ತು ಆಕೆಯ ಮಗು ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಮಗುವಾಗ ಮೇಲೆ ಆಕೆ ಹೆಚ್ಚು ಸಮಯ ಫೇಸ್ ಬುಕ್ ನಲ್ಲೇ ಕಳೆಯುತ್ತಿದ್ದಳು, ಮಗುವಿನ ಕಡೆ ಗಮನ ಕೊಡುತ್ತಿರಲಿಲ್ಲ, ಹಲವು ಮಂದಿ ಜೊತೆ ಚಾಟ್ ಮಾಡುತ್ತಿದ್ದಳು, ಹೀಗಾಗಿ ಆಕೆಯ ತಕಲೆ ಮೇಲೆ ಕಲ್ಲು ಎತ್ತು ಹಾಕಿ, ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾಗಿ ಹೇಳಿಕೆ ಕೊಟ್ಟಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್