ರಾಜ್ಯ

ಐಎಂಎ ಪ್ರಕರಣ: ಮುಜಾಹಿದ್ ಮನೆಯಿಂದ 1.16 ಕೋಟಿ ನಗದು ವಶ; ಆರೋಪಿಗೆ 13 ದಿನ ಪೊಲೀಸ್ ಕಸ್ಟಡಿ

Sumana Upadhyaya
ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಸೈಯದ್ ಮುಜಾಹಿದ್ ಅವರ ಮನೆಯಿಂದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಇದುವರೆಗೆ 1 ಕೋಟಿಯ 16 ಲಕ್ಷದ 94 ಸಾವಿರದ 307 ರೂಪಾಯಿ ನಗದು ಹಾಗೂ ಐಎಂಎ ಒಡೆತನದ ಕಂಪೆನಿಗಳ ಹೆಸರಿನ ಒಟ್ಟು 101 ಬ್ಯಾಂಕ್ ಖಾತೆಗಳನ್ನು ಪತ್ತೆ ಮಾಡಲಾಗಿದೆ ಎಂದು ವಿಶೇಷ ತನಿಖಾ ತಂಡ ತಿಳಿಸಿದೆ.
ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೈಯದ್ ಮುಜಾಹಿದ್ ಅವರನ್ನು ಎಸ್ ಐಟಿ ನಿನ್ನೆ ಬಂಧಿಸಿತ್ತು. ಫ್ರೇಜರ್‌ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಆರೋಪಿ ಸೈಯದ್ ಮುಜಾಹಿದ್ ಅವರ ವಾಸದ ಮನೆಯಲ್ಲಿ ಶೋಧ ಕಾರ್ಯ ನಡೆಸಿ, ಕೃತ್ಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಕಾಗದ ಪತ್ರಗಳು, ಒಂದು ಫಾರ್ಚುನರ್ ಕಾರು ಹಾಗೂ ಎರಡು ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು 13 ದಿನ ಪೊಲೀಸ್ ಕಸ್ಟಡಿಗೊಪ್ಪಿಸಲಾಗಿದೆ.
SCROLL FOR NEXT