ರಾಜ್ಯ

ಪ್ರವಾಸಿಗರಿಗೆ ಖುಷಿಯ ಸಂಗತಿ: ದುಬಾರೆಯಲ್ಲಿ ರ್ಯಾಫ್ಟಿಂಗ್ ಶೀಘ್ರದಲ್ಲೇ ಆರಂಭ!

Vishwanath S
ಮಡಿಕೇರಿ: ರ್ಯಾಫ್ಟಿಂಗ್ ವೇಳೆ ಹೊಡೆದಾಡಿಕೊಂಡು ಪ್ರವಾಸಿಗನೊಬ್ಬ ಮೃತಪಟ್ಟ ಹಿನ್ನೆಲೆಯಲ್ಲಿ ಸ್ವಲ್ಪ ದಿನ ದುಬಾರೆಯಲ್ಲಿ ರ್ಯಾಫ್ಟಿಂಗ್ ಅನ್ನು ನಿಲ್ಲಿಸಲಾಗಿತ್ತು. ಇದೀಗ ಕೊಡಗು ಜಿಲ್ಲಾಧಿಕಾರಿ ಅನ್ನಿಸ್ ಕಣ್ಮನಿ ಜಾಯ್ ಅವರು ರ್ಯಾಫ್ಟ್ ಮಾಲೀಕರರಿಗೆ ಅಂತಿಮ ನಿಯಮಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಿದ್ದು ಇನ್ನು ಒಂದು ತಿಂಗಳೊಳಗೆ ರ್ಯಾಫ್ಟಿಂಗ್ ಆರಂಭಗೊಳ್ಳಲಿದೆ. 
ರ್ಯಾಫ್ಟ್ ಮಾಲೀಕರಿಗೆ ರ್ಯಾಫ್ಟಿಂಗ್ ವೇಳೆ ಪ್ರವಾಸಿಗರ ಸುರಕ್ಷತೆ ಕುರಿತಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕಠಿಣ ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ. ದುಬಾರೆಯಲ್ಲಿನ ಕಾವೇರಿ ನದಿಯಲ್ಲಿ ನಡೆಯುವ ರ್ಯಾಫ್ಟಿಂಗ್ ಅನ್ನು ಮತ್ತೆ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಾದ ಅರಣ್ಯ ಮತ್ತು ಪ್ರವಾಸೋದ್ಯಮ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ವಹಿಸಿದ್ದಾರೆ.
ಇನ್ನು ರ್ಯಾಫ್ಟಿಂಗ್ ಶುಲ್ಕಗಳು ಪ್ರತಿ ಗುಂಪಿಗೆ 600 ರುಪಾಯಿ ಮೀರಬಾರದು. ದುಬಾರೆ ಪ್ರದೇಶದಲ್ಲಿ ಒಟ್ಟು 48 ರ್ಯಾಫ್ಟ್ ಗಳಿಗೆ ಅನುಮತಿ ನೀಡಲಾಗಿದೆ. 
SCROLL FOR NEXT