ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ಹಗ್ ಮಾಡುವಾಗ ದುರ್ವಾಸನೆ ಬಂದಿತೆಂದು ಸ್ನೇಹಿತನಿಗೆ ಚೂರಿ ಇರಿತ!

ಯುವಕನೊಬ್ಬ ತನ್ನ ಸ್ನೇಹಿತನನ್ನು ಹಗ್ ಮಾಡುವಾಗ ಅವನ ಉಸಿರಿನಿಂಡ ಕೆಟ್ಟ ವಾಸನೆ ಹೊರಟಿತೆಂಬ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ದೂರ ತಳ್ಳಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಯುವಕನೊಬ್ಬ ತನ್ನ ಸ್ನೇಹಿತನನ್ನು ಹಗ್ ಮಾಡುವಾಗ ಅವನ ಉಸಿರಿನಿಂಡ ಕೆಟ್ಟ ವಾಸನೆ ಹೊರಟಿತೆಂಬ ಕಾರಣಕ್ಕೆ ಚಾಕುವಿನಿಂದ ಹಲ್ಲೆ ನಡೆಸಿದ ನಂತರ ದೂರ ತಳ್ಳಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಈ ವೇಳೆ ಸಹಾಯಕ್ಕಾಗಿ ತೆರಳಿದ್ದ ಸಂತ್ರಸ್ತ ಯುವಕನ ಸೋದರನ ಮೇಲೆ ಸಹ ಹಲ್ಲೆ ಮಾಡಲಾಗಿದೆ. ಸಧ್ಯ ಸೋದರರಾದ ಶೋಯಬ್ ಹಾಗೂ ಶಾಹಿದ್ ಪಾಷಾ ಅವರುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಘಟನೆ ವಿವರ
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಮಾವಳ್ಳಿ ಮಸೀದಿಯ ರಸ್ತೆಯ ಎದುರಿನ ಎಲ್‌ಬಿಎಫ್ ರಸ್ತೆಯಲ್ಲಿ ಸೋದರರು ಬೈಕ್ ನಲ್ಲಿ ತೆರಳುತ್ತಿದ್ದಾಗ ಶೋಯೆಬ್ ತನ್ನ ಸ್ನೇಹಿತ ನಬಿಯನ್ನು ಗಮನಿಸಿ ವಾಹನ ನಿಲ್ಲಿಸಿದ್ದಾನೆ. 
ಇಬ್ಬರೂ ಪರಸ್ಪರ ಶುಭಾಶ್ಯ ಕೋರಿ ಹಗ್ (ತಬ್ಬಿಕೊಳ್ಳುವ) ಮಾಡುವ ವೇಳೆ ಶೋಯೆಬ್ ಉಸಿರಿನಿಂದ ದುರ್ವಾಸನೆ ನಬಿ ಮೂಗಿಗೆ ಬಡಿದಿದೆ. ತಕ್ಷಣ ಕೋಪಗೊಂಡ ನಬಿ ಶೋಯೆಬ್‌ನ ನಿಂದಿಸಿದ್ದಾನೆ. ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಇದು ಕಾರಣವಾಗಿದೆ. ಆ ವೇಳೆ ನಬಿ ಚಾಕುವನ್ನು ಹೊರತೆಗೆದು ಶೋಯೆಬ್‌ನ ಹೊಟ್ಟೆಗೆ ಇರಿದಿದ್ದಾನೆ. ಆಗ ಶೋಯಬ್ ಸಹೋದರ ಶಾಹಿದ್ ಸಹಾಯಕ್ಕಾಗಿ ಮುಂದಾದಾಗ ಅವನ ಮೇಲೆಯೂ ನಬಿ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಆಟೋಮೊಬೈಲ್ ಪರಿಕರಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಿದ್ದಾಪುರ ನಿವಾಸಿ ನಬಿಯನ್ನು ಪೊಲೀಸರು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

"Bad News": ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪುತ್ತಿಲ್ಲ- ಜೆಡಿ ವ್ಯಾನ್ಸ್!

ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನೇರ ಮಾತುಕತೆ; ಅಮೆರಿಕದ ಬೇಡಿಕೆ ಅತಿಯಾಗಿದೆ ಎಂದು ಇರಾನ್ ಮಾಧ್ಯಮಗಳ ಆರೋಪ

SCROLL FOR NEXT