ರಾಜ್ಯ

ಬೆಂಗಳೂರು: ಭಾರೀ ಪ್ರಮಾಣದ ಹಣ ಠೇವಣಿ ಇಡಲು ಬ್ಯಾಂಕ್‌ಗೆ ಬಂದಿದ್ದ ಮೂವರ ಬಂಧನ

Lingaraj Badiger
ಬೆಂಗಳೂರು: ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕ್ ಗೆ ಗುರುವಾರ ಸಂಜೆ 1.09 ಕೋಟಿ ರೂ. ನಗದು ಕಟ್ಟಲು ಬಂದು ಅನುಮಾನಾಸ್ಪದವಾಗಿ ವರ್ತಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಣ ಕಟ್ಟಲು ಬ್ಯಾಂಕ್‌ಗೆ ಬಂದಿದ್ದ ಮೂವರ ಚಲನ ವಲನಗಳ ಬಗ್ಗೆ ಬ್ಯಾಂಕ್‍ ಮ್ಯಾನೇಜರ್‌ಗೆ ಸಂಶಯ ಬಂದಿದ್ದು, ತಕ್ಷಣ ಅವರು ಈ ಬಗ್ಗೆ ನೆಲಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಪೊಲೀಸರು ಸ್ಥಳಕ್ಕಾಗಮಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ
ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ಮೂವರು ವ್ಯಕ್ತಿಗಳು ಐಸಿಐಸಿಐ ಬ್ಯಾಂಕ್ ಗೆ 1.09 ಕೋಟಿ ರೂ.ಕಟ್ಟುವುದಕ್ಕಾಗಿ ದೊಡ್ಡ ಮೂರು ಬ್ಯಾಗ್ ಗಳಲ್ಲಿ ಹಣ ತುಂಬಿಕೊಂಡು ಬಂದಿದ್ದರು.
ನೆಲಮಂಗಲದ ಬ್ಯಾಂಕ್ ನಲ್ಲಿ ಬೆಳಗಾವಿಯ ಬೈಲಹೊಂಗಲದ ದಮಾಂಗಿ ವಿಷ್ಯುವಲ್ ಫೌಂಡೇಶನ್ ಎಂಬ ಎನ್‌ಜಿಒ ಹೆಸರಿನಲ್ಲಿ ನಕಲಿ ಚೆಕ್ ಬಳಸಿ 3.09 ಕೋಟಿ ರೂ ಹಣವನ್ನು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಐಸಿಐಸಿಐ ಬ್ಯಾಂಕಿನಲ್ಲಿ ಡ್ರಾ ಮಾಡಿದ್ದರು.
ಈ ಹಣದಲ್ಲಿ 1.09 ಕೋಟಿ ರೂ. ಹಣವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್‌ಗೆ ಠೇವಣಿ ಇಡಲು ಗುರುವಾರ ಸಂಜೆ ಬಂದಿದ್ದರು. ಬ್ಯಾಂಕ್‌ನಲ್ಲಿ ಅವರು ಸಂಶಯಾಸ್ಪದವಾಗಿ ನಡೆದುಕೊಂಡಿರುವುದರಿಂದ ಬ್ಯಾಂಕ್ ಮ್ಯಾನೇಜರ್ ಗೆ ಸಂಶಯ ಬಂದಿದ್ದು, ಈ ಬಗ್ಗೆ ಮ್ಯಾನೇಜರ್ ನೆಲಮಂಗಲ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
SCROLL FOR NEXT