ಕುಂದಾಪುರ: ತಾಯಿ ಜತೆ ಮಲಗಿದ್ದ ಎರಡು ವರ್ಷದ ಮಗು ಅಪಹರಣ
ಕುಂದಾಪುರ: ತಾಯಿಯ ಪಕ್ಕದಲ್ಲಿ ಮಲಗಿದ್ದ ಹೆಣ್ಣು ಮಗುವೊಂದನ್ನು ದುಷ್ಕರ್ಮಿಗಳಿಬ್ಬರು ಗುರುವಾರ ಬೆಳ್ಳಂಬೆಳಗ್ಗೆ ಅಪಹರಿಸಿರುವ ಘಟನೆ ಕುಂದಾಪುರ ತಾಲೂಕಿನ ಎಡಮೊಗೆ ಗ್ರಾಮದಲ್ಲಿ ನಡೆದಿದೆ.
ಎಡಮೊಗೆ ಗ್ರಾಮದ ಕುಮ್ಟಿ ಬೇರು ಸಂತೋಷ್ ನಾಯ್ಕ ಎಂಬುವವರ ಎರಡು ವರ್ಷದ ಹೆಣ್ಣು ಮಗುವನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ.
ಸಂತೋಷ್ ನಾಯ್ಕ, ಪತ್ನಿ ಹಾಗೂ ತಮ್ಮ ಎರಡು ಮಕ್ಕಳೊಂದಿಗೆ ನಿದ್ರಿಸುತ್ತಿದ್ದಾಗ. ನಸುಕಿನ ಜಾವ 4 ಗಂಟೆಗೆ ಮನೆಯ ಎಡಬಾಗಿಲಿನಿಂದ ಒಳನುಗ್ಗಿದ ದುಷ್ಕರ್ಮಿಗಳು ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ, ತಾಯಿ ಎಚ್ಚರಗೊಂಡು, ದುಷ್ಕರ್ಮಿಗಳನ್ನು ಹಿಂಬಾಲಿಸುತ್ತಾ ಬೊಬ್ಬೆ ಹಾಕಿದ್ದಾರೆ. ಆಗ ಅಪಹರಣಕಾರರು ಮಗುವಿನ ಸಮೇತ ತುಂಬಿ ಹರಿಯುತ್ತಿದ್ದ ಕುಬ್ಜಾ ನದಿಗೆ ಹಾರಿದ್ದಾರೆ.ಬಳಿಕ ಈಜುತ್ತಾ ನದಿ ದಾಟಿ ಹೊಸಂಗಡಿಯತ್ತ ಪರಾರಿಯಾಗಿದ್ದಾರೆ.
ಘಟನೆಗೆ ಕಾರಣವಿನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಶಂಕರನಾರಾಯಣ ಪೋಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಈ ಮಗುವಿನ ಬಗ್ಗೇ ಮಾಹಿತಿ ಸಿಕ್ಕಿದರೆ
ಉಡುಪಿ ಪೊಲೀಸ್ ಕಂಟ್ರೋಲ್ 0820 2526444, 0820 2526709 ಹಾಗೆ ಶಂಕರನಾರಾಯಣ ಠಾಣೆ 08259 280299 & 9480805456 ಮಾಹಿತಿ ಕೊಡಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos