ಇದೇ ವೇಳೆ ವಿಜಯವಾಣಿ ಪತ್ರಿಕೆಯ ಟೆಕ್ ಲೋಕದ ಜನಪ್ರಿಯ ಅಂಕಣಕಾರ ಟಿ.ಜಿ ಶ್ರೀನಿಧಿ ಅವರ ಟೆಕ್ ಲೋಕದ ಹತ್ತು ಹೊಸ ಮುಖಗಳು ಪುಸ್ತಕವೂ ಬಿಡುಗಡೆಯಾಗಲಿದೆ.
ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಖ್ಯಾತ ಲೇಖಕ ವಸುಧೇಂದ್ರ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.
ಹಣಕ್ಲಾಸು ಭಾಗ-1, ಭಾಗ-2, ಸ್ಪ್ಯಾನಿಷ್ ಗಾದೆಗಳು ರಂಗಸ್ವಾಮಿ ಅವರ ಇತರ ಜನಪ್ರಿಯ ಪುಸ್ತಕಗಳಾಗಿವೆ. ಹಣಕ್ಲಾಸು ಪ್ರತಿ ಗುರುವಾರ ಕನ್ನಡಪ್ರಭ.ಕಾಮ್ ನಲ್ಲಿ ಪ್ರಕಟವಾಗುವ ಅಂಕಣ ಬರಹವಾಗಿದೆ.