ರಾಜ್ಯ

ಬೆಳಗಾವಿ: ಚಲಿಸುವ ರೈಲಿನಿಂದ ನವಜಾತ ಹೆಣ್ಣುಮಗುವನ್ನು ಎಸೆದ ಕಟುಕರು, ರೈತಾಪಿ ಜನರಿಂದ ರಕ್ಷಣೆ

Raghavendra Adiga
ಬೆಳಗಾವಿ: ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದೇಶಾದ್ಯಂತ ಕೂಗು ಏಳುತ್ತಿರುವ ಬೆನ್ನಲ್ಲೇ ಬೆಳಗಾವಿಯ್ತ ಖಾನಾಪುರ ಲೋಂಡಾ ಸಮೀಪ ನವಜಾತ ಹೆಣ್ಣು ಮಗುವೊಂದನ್ನು ಚಲಿಸುತ್ತಿದ್ದ ರೈಲಿನಿಂದ ಎಸೆದಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಹಳಿ ಪಕ್ಕ ನಡೆದುಹೋಗುತ್ತಿದ್ದ ಕೆಲವು ರೈತಾಪಿ ವರ್ಗದ ಜನರಿಗೆ ಮಗುವಿನ ಅಳುವಿನ ದನಿ ಕೇಳಿದ್ದು ಗಾಯಗೊಂಡ ಮಗುವನ್ನು ರಕ್ಷಿಸಿದ್ದಾರೆ.
ಲೋಂಡಾ-  ಅಕ್ರಾಲಿ ನಡುವಿನ ದಟ್ಟ ಕಾಡುಗಳ ನಡುವೆ ರೈಲು ಚಲಿಸುತ್ತಿದ್ದ ಸಮಯ ಮಗುವನ್ನು ರೈಲಿನಿಂಡ ಎಸೆಯಲಾಗಿದೆ ಎಂದು ಪೋಲೀಸರು ಶಂಕಿಸಿದ್ದಾರೆ. 
ಇದು ದಟ್ಟ ಕಾನನವಾಗಿದ್ದು ಭಾರೀ ಮಳೆಬೀಳುವ ಪ್ರದೇಶವಾಗಿದೆ. ರೈತರು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮಗು ಅಳುತ್ತಿರುವುದನ್ನುಪತ್ತೆ ಮಾಡಿದ್ದಾರೆ.  ಅವರಲ್ಲಿ ಒಬ್ಬರು ತಕ್ಷಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ್ ದೇಸಾಯಿ ಅವರಿಗೆ ಮಾಹಿತಿ ನೀಡಿದರು, ನಂತರ ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಕಛೇರಿಗೆ ಮಾಹಿತಿ ಕೊಡಲಾಗಿದೆ. ಅಲ್ಲದೆ ರೈಲ್ವೆ ಪೊಲೀಸರಿಗೆ ಸಹ ವಿಷಯ ತಿಳಿಸಲಾಗಿದೆ.
ಮಾಹಿತಿ ಪಡೆದ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆಣ್ಣು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
SCROLL FOR NEXT