ರಾಜ್ಯ

ಶೀಘ್ರದಲ್ಲಿ ಕೆ. ಆರ್ ಪುರಂ-ವಿಮಾನ ನಿಲ್ದಾಣ ಮಾರ್ಗದಲ್ಲಿ ಹೊಸ ಮೆಟ್ರೊ ನಿಲ್ದಾಣ

Sumana Upadhyaya
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಬಗಲೂರು ಕ್ರಾಸ್ ಮತ್ತು ಟ್ರಂಪೆಟ್ ಜಂಕ್ಷನ್ ಮಧ್ಯೆ ಬೆಟ್ಟಹಲಸೂರು ಹೊಸ ಮೆಟ್ರೊ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮೊದಲು ಯೋಜನೆ ಮಾಡಿದಂತೆ ಕಸ್ತೂರಿ ನಗರ ಮತ್ತು ಚನ್ನಸಂದ್ರ ಮೆಟ್ರೊ ನಿಲ್ದಾಣವನ್ನು ಒಟ್ಟು ಸೇರಿಸಿದೆ.
ಇನ್ನು ನಾಲ್ಕು ಮೆಟ್ರೊ ನಿಲ್ದಾಣಗಳನ್ನು ಮರು ನಾಮಕರಣ ಮಾಡುವ ಮೆಟ್ರೊ ರೈಲು ನಿಗಮದ ಪ್ರಸ್ತಾವನೆಗೆ ಕಳೆದ 20ರಂದು ಸರ್ಕಾರ ಆದೇಶ ಹೊರಡಿಸಿದೆ. 
ಈ ಹಿಂದೆ ಅಂದಾಜು ಮಾಡಿದಂತೆ 10 ಸಾವಿರ 584.15 ಕೋಟಿ ವೆಚ್ಚದಲ್ಲಿ 38 ಕಿಲೋ ಮೀಟರ್ ಉದ್ದದ ವಿಮಾನ ನಿಲ್ದಾಣ ಮಾರ್ಗದಲ್ಲಿ 17 ಮೆಟ್ರೊ ನಿಲ್ದಾಣಗಳನ್ನು ಖಾಸಗಿ ಹೂಡಿಕೆಯೊಂದಿಗೆ ನಿರ್ಮಿಸಲಾಗುತ್ತದೆ. ಮುಂದಿನ ಅಕ್ಟೋಬರ್ ಹೊತ್ತಿಗೆ ಕಾಮಗಾರಿಕೆ ಮೆಟ್ರೊ ನಿಗಮ ಟೆಂಡರ್ ಕರೆಯಲಿದೆ ಎಂದು ಅದರ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಥ್ ತಿಳಿಸಿದ್ದಾರೆ.
ಹೊಸ ಮೆಟ್ರೊ ನಿಲ್ದಾಣಗಳ ಸ್ಥಾಪನೆಯಿಂದ ಉತ್ತರ ಯಲಹಂಕ ಭಾಗ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಕಸ್ತೂರಿ ನಗರ, ಚನ್ನಸಂದ್ರ, ಹೊರಮಾವು, ಬಾಬುಸಾಹೇಬಪಾಳ್ಯ, ಕಲ್ಯಾಣ ನಗರ, ಹೆಚ್ ಬಿಆರ್ ಲೇ ಔಟ್, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಕೊಗಿಲು ಕ್ರಾಸ್, ಬಗಲೂರು/ ಪಿಆರ್ ಆರ್ ಕ್ರಾಸ್, ಟ್ರಂಪೆಟ್ ಜಂಕ್ಷನ್, ಸ್ಕೈ ಗಾರ್ಡನ್, ಏರ್ ಪೋರ್ಟ್ ಟರ್ಮಿನಲ್ ಉದ್ದೇಶಿತ ಹೊಸ ಮೆಟ್ರೊ ನಿಲ್ದಾಣಗಳಾಗಿವೆ.
SCROLL FOR NEXT