ಬೆಂಗಳೂರು: ನೂತನ ಅಡ್ವೋಕೆಟ್ ಜನರಲ್ ಆಗಿ ಕೆ. ಪ್ರಭುಲಿಂಗ ಕೆ. ನಾವಡ್ಗಿ ಅವರನ್ನು ನೇಮಿಸಲಾಗಿದೆ.
ರಾಜ್ಯಪಾಲ ವಜೂಭಾಯಿ ವಾಲಾ ಅವರು ತಮ್ಮಗಿರುವ ಸಂವಿಧಾನದ 165(1) ರ ಅಡಿ ಈ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದಾರೆ.
ಈವರೆಗೆ ಅಡ್ವೋಕೆಟ್ ಜನರಲ್ ಆಗಿದ್ದ ಉದಯ್ ಹೊಳ್ಳ ಅವರು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಅವರಿಂದ ತೆರವಾಗಿದ್ದ ನೂತನ ಅಡ್ವೋಕೆಟ್ ಜನರಲ್ ಹುದ್ದೆಗೆ ಪ್ರಭುಲಿಂಗ ಕೆ. ನಾವಡ್ಗಿ ಅವರನ್ನು ನೇಮಕ ಮಾಡಲಾಗಿದೆ.