ರಾಜ್ಯ

ಇಂದಿರಾ ಕ್ಯಾಂಟೀನ್ ಇನ್ನು ಅನ್ನಪೂರ್ಣ ಕ್ಯಾಂಟೀನ್!

Raghavendra Adiga
ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ "ಇಂದಿರಾ ಕ್ಯಾಂಟೀನ್" ಇರುವುದಿಲ್ಲ! ಇಷ್ಟು ಕೇಳಿದಾಕ್ಷಣ ಗಾಬರಿಯಾಗಬೇಕಾಗಿಲ್ಲ. ಇದೀಗ ರಾಜ್ಯದಲ್ಲಿ ಅಧಿಕಾರಕ್ಕೇರಿರುವ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರ "ಇಂದಿರಾ ಕ್ಯಾಂಟೀನ್" ಹೆಸರನ್ನು "ಅನ್ನಪೂರ್ಣ ಕ್ಯಾಂಟೀನ್" ಎಂದು ಮರುನಾಮಕರಣ ಮಾಡಲು ನಿರ್ಧರಿಸಿದೆ. ಯಡಿಯೂರಪ್ಪ ಸರ್ಕಾರ ತಾವು ಅಧಿಕಾರಕ್ಕೇರಿದ ಮೊದಲಿಗೆ ತೆಗೆದುಕೊಳ್ಳಲಾಗಿರುವ ಪ್ರಮುಖ ನಿರ್ಧಾರಗಳಲ್ಲಿ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡುವುದು ಸಹ ಸೇರಿದೆ.
ಹೆಸರು ಬದಲಾವಣೆಯ ಬಗ್ಗೆ ಬಿಜೆಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಸಾರ್ವಜನಿಕ ಆಡಳಿತ ಇಲಾಖೆಯೊಂದಿಗೆ ಚರ್ಚಿಸಿದೆ. ಸರ್ಕಾರವು ಲಿಖಿತ ಆದೇಶಗಳನ್ನು ನೀಡಿದ ನಂತರ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ ಚುರುಕಾಗಲಿದೆ ಎಂದು ಹೇಳಲಾಗಿದೆ.
ಯಾವುದೇ ರಾಜಕೀಯ ನಾಯಕ, ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ಹೆಸರನ್ನು ಕ್ಯಾಂಟೀನ್ ಗೆ ಇಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. “ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರೂ, ಅವರ ಹೆಸರನ್ನು ಬಳಸುವುದು ಕಾಂಗ್ರೆಸ್ ರಾಜಕೀಯ ಗಿಮಿಕ್. ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿ ಇದು ಅನೇಕ ಯೋಜನೆಗಳಿವೆ" ಅವರು ಹೇಳಿದ್ದಾರೆ.
“ಆಡಳಿತದ ಬದಲಾವಣೆಯೊಂದಿಗೆ ಹೆಸರು  ಬದಲಾವಣೆಯನ್ನು ಸಂಪರ್ಕಿಸುವ ವಿಚಾರವಿಲ್ಲ. ಪಕ್ಷದ ಪ್ರಣಾಳಿಕೆಯಲ್ಲೂ  ಈ ವಿಚಾರ ಘೋಷಣೆಯಾಗಿದ್ದರಿಂದಾಗಿ ಇಂದಿರಾ ಕ್ಯಾಂಟೀನ್ ಗೆ ಮರುನಾಮಕರಣ ಮಾಡಲು ಹೊಸ ಸರ್ಕಾರ ಬಯಸಿದೆ.ಹೈದರಾಬಾದ್ ನಲ್ಲಿ ಸಹ ಇದಾಗಲೇ ಅನ್ನಪೂರ್ಣ ಕ್ಯಾಂಟೀನ್ ಕಾರ್ಯಾಚರಿಸಿದೆ. ಇನ್ನು ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಹೆಸರಿನಲ್ಲಿ ರಿಯಾಯಿತಿ ದರದ ಆಹಾರ ಪೂರೈಸುವ ಕ್ಯಾಂಟೀನ್ ಗಳಿದೆ."
ಅಮ್ಮ ಕ್ಯಾಂಟೀನ್‌ಗೆ ಸಮನಾಗಿರಲು, ಈ ಕ್ಯಾಂಟೀನ್‌ಗಳಲ್ಲಿ ನೀಡಲಾಗುವ ಆಹಾರದ ದರವನ್ನು ಕಡಿಮೆ ಮಾಡಲು ಮತ್ತು ಮೆನುವಿನಲ್ಲಿ ಹೆಚ್ಚಿನ ಆಯ್ಕೆಗಳನ್ನು ಸೇರಿಸಲು ಬಿಜೆಪಿ ಸರ್ಕಾರ ಯೋಚಿಸುತ್ತಿದೆ. ಇದಕ್ಕಾಗಿ, ಸಮ್ಮಿಶ್ರ ಸರ್ಕಾರವು ಆಸಕ್ತಿ ವಹಿಸದ ಅಕ್ಷಯ ಪಾತ್ರೆ ಪ್ರತಿಷ್ಠಾನದೊಂದಿಗೆ ಕೈಜೋಡಿಸುತ್ತಿದೆ.
ಸಿದ್ದರಾಮಯ್ಯ ಸರ್ಕಾರ 2017 ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಿತು.
SCROLL FOR NEXT