ರಾಜ್ಯ

ಐಎಂಎ ವಂಚನೆ ಪ್ರಕರಣ: ರೌಡಿ ಶೀಟರ್ ಇಶ್ತಿಯಾಕ್ ಬಂಧನ

Nagaraja AB
ಬೆಂಗಳೂರು:  ಐಎಂಎ ವಂಚನೆ ಪ್ರಕರಣದಲ್ಲಿ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಅವರಿಂದ 2 ಕೋಟಿ ರೂಪಾಯಿ ಲಂಚ ಸ್ವೀಕಾರ ಆರೋಪದ ಮೇರೆಗೆ ರೌಡಿ ಶೀಟರ್ ಹಾಗೂ  ಶಿವಾಜಿನಗರ ಕಾರ್ಪೋರೇಟರ್  ಪಾರಿದ ಪತಿ ಇಶ್ತಿಯಾಕ್ ನನ್ನು ಬಂಧಿಸಲಾಗಿದೆ.
ಜುಲೈ 19 ರಂದು ದುಬೈಯಿಂದ ದೆಹಲಿಗೆ ಬಂದಿದ್ದ ಮನ್ಸೂರ್ ಕಾನ್ ನನ್ನು  ಬಂಧಿಸಿ, ಜುಲೈ 23ರವರೆಗೂ  ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿತ್ತು. 
ಎಸ್ ಐಟಿ ಈ ಪ್ರಕರಣದ ತನಿಖೆ ಕೈಗೊಂಡ ನಂತರ ರಾಷ್ಟ್ರಕ್ಕೆ ಮರಳಿದ ಮನ್ಸೂರ್ ಖಾನ್ ನನ್ನು ಕಾನೂನಿನ ಮುಂದೆ ಹಾಜರುಪಡಿಸಲಾಗಿತ್ತು. ಡಿಐಜಿ  ಬಿ. ಆರ್. ರವಿಕಾಂತೇಗೌಡ ನೇತೃತ್ವದ 11 ಮಂದಿ ಸದಸ್ಯರನ್ನೊಳಗೊಂಡ ಎಸ್ ಐಟಿ ತಂಡ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಮನ್ಸೂರ್ ಖಾನ್ ವಿರುದ್ದ 40 ಸಾವಿರಕ್ಕೂ ಹೆಚ್ಚು ವಂಚನೆ ದೂರುಗಳು ದಾಖಲಾಗಿದ್ದವು.  ಶಿವಾಜಿನಗರ ಶಾಸಕ ರೋಷನ್ ಬೇಗ್ ಕೂಡಾ ತಮ್ಮಿಂದ 400 ಕೋಟಿ ರೂಪಾಯಿ ಪಡೆದು ವಾಪಾಸ್ ನೀಡಿಲ್ಲ ಎಂದು  ಮನ್ಸೂರ್ ಖಾನ್ ಆರೋಪ ಮಾಡಿದ್ದ.
SCROLL FOR NEXT