ಬೆಂಗಳೂರು: ರಾಜ್ಯ ಐಟಿ, ಬಿಟಿ ಮತ್ತು ಎಸ್ ಅಂಡ್ ಟಿ(ಮಾಹಿತಿ ತಂತ್ರಜ್ಞಾನ, ಜೀವ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ) ಇಲಾಖೆ ಆಯೋಜಿಸಿದ್ದ ಎಲೆವೇಟ್ 2019 ನಲ್ಲಿ 270 ಸ್ಟಾರ್ಟ್ ಅಪ್ ಕೇಂದ್ರಗಳು ಭಾಗವಹಿಸಿದ್ದು ಅವುಗಳಲ್ಲಿ 100 ಸ್ಟಾರ್ಟ್ ಅಪ್ ಗಳನ್ನು ವಿಜಯಶಾಲಿ ಎಂದು ಆಯ್ಕೆ ಮಾಡಿಕೊಳ್ಳಲಾಯಿತು.
100 ವಿಜಯಿಗಳಲ್ಲಿ, 29 ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ ಮಹಿಳಾ ಉದ್ಯಮಿಗಳು ಸಹ ಸಂಸ್ಥಾಪಕರಾಗಿದ್ದಾರೆ. ಅವರಲ್ಲಿ 23 ಮಂದಿ ಎರಡನೇ ಮತ್ತು ಮೂರನೇ ದರ್ಜೆಯ ನಗರಗಳಿಂದ ಬಂದವರು. 76 ಸ್ಟಾರ್ಟ್ ಅಪ್ ಗಳು ಬೆಂಗಳೂರು, 10 ಧಾರವಾಡ, 3 ದಕ್ಷಿಣ ಕನ್ನಡ, ತಲಾ 2 ಮೈಸೂರು ಮತ್ತು ಉಡುಪಿ ಹಾಗೂ ತಲಾ ಒಂದೊಂದು ಸ್ಟಾರ್ಟ್ ಅಪ್ ಗಳು ಬಿಜಾಪುರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ತುಮಕೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸ್ಟಾರ್ಟ್ ಅಪ್ ಗಳು ಎಲೆವೇಟ್ 2019ನ್ನು ಗೆದ್ದಿವೆ ಎಂದು ರಾಜ್ಯ ಐಟಿ, ಬಿಟಿ ಇಲಾಖೆ ಪ್ರಕಟಣೆ ತಿಳಿಸಿದೆ.
ಯಾವುದೇ ಷೇರು ಪಡೆಯದೆ ಸ್ಟಾರ್ಟ್ ಅಪ್ ಗಳಿಗೆ ಅನುದಾನ ನೀಡುವ ರಾಜ್ಯ ಕರ್ನಾಟಕವೇ ಮೊದಲು. ತಂತ್ರಜ್ಞಾನ ಮತ್ತು ಹೊಸ ಹೊಸ ಆಲೋಚನೆಗಳನ್ನು ನವೀನಗೊಳಿಸಲು ಇರುವ ಕಾನೂನು ಅಡೆತಡೆಗಳನ್ನು ನಿವಾರಿಸಲು ಸ್ಟಾರ್ಟ್ ಅಪ್ ಗಳ ಸಶಕ್ತೀಕರಣಕ್ಕೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸದ್ಯದಲ್ಲಿಯೇ ನಾವೀನ್ಯ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್ ಭಾಸ್ಕರ್ ತಿಳಿಸಿದ್ದಾರೆ.
ಸ್ಟಾರ್ಟ್ ಅಪ್ ಗಳಿಗೆ ನೀಡಿದ ಹಣವನ್ನು ನಿಗದಿತವಾಗಿ ಸರ್ಕಾರ ನಿಗಾವಹಿಸುತ್ತಿರುತ್ತದೆ. ಸ್ಟಾರ್ಟ್ ಅಪ್ ಗಳ ಪ್ರಗತಿಯ ಆಧಾರದ ಮೇಲೆ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos