ರಾಜ್ಯ

ಸಿದ್ಧಾರ್ಥ್ ಅವರ ಸಹಿ ಹೊಂದಿಕೆಯಾಗುತ್ತಿಲ್ಲ: ಐಟಿ ಇಲಾಖೆ

Sumana Upadhyaya
ಬೆಂಗಳೂರು/ನವದೆಹಲಿ: ಆತ್ಮಹತ್ಯೆಗೆ ಮುಂಚೆ ವಿ ಜಿ ಸಿದ್ದಾರ್ಥ್ ಅವರು ಬರೆದಿದ್ದರು ಎನ್ನಲಾದ ಡೆತ್ ನೋಟ್ ನಲ್ಲಿ ಅವರ ಸಹಿ ಅವರು ತಮ್ಮ ವಾರ್ಷಿಕ ವರದಿಯಲ್ಲಿ ಹಾಕಿದ ಸಹಿಯ ಜೊತೆ ಹೊಂದಿಕೆಯಾಗುತ್ತಿಲ್ಲ ಎಂದು ಕರ್ನಾಟಕ, ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರ ಕಚೇರಿ ಹೇಳಿದ್ದು, ಪತ್ರದ ನಿಖರತೆ ಬಗ್ಗೆ ಅನುಮಾನವಿದೆ ಎಂದು ಹೇಳಿದೆ.
ಸಿದ್ಧಾರ್ಥ್ ಕೆಫೆ ಕಾಫಿ ಡೇ ಸಂಸ್ಥೆಯ ಉದ್ಯೋಗಿಗಳು ಮತ್ತು ನಿರ್ದೇಶಕರ ಮಂಡಳಿಗೆ ಬರೆದಿದ್ದರು ಎಂದು ಹೇಳಲಾಗುವ ಪತ್ರದಲ್ಲಿ ಐಟಿ ಇಲಾಖೆಯ ಮಾಜಿ ಡಿಜಿಯಿಂದ ತೀವ್ರ ಕಿರುಕುಳವಿತ್ತು ಎಂದು ಹೇಳಿದ್ದರು, ಆದರೆ ಹೆಸರನ್ನು ಪ್ರಸ್ತಾಪಿಸಿರಲಿಲ್ಲ.
2017ರ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕ ಮತ್ತು ಗೋವಾ ವೃತ್ತದ ಐಟಿ ಮಹಾ ನಿರ್ದೇಶಕರು ಸಿದ್ಧಾರ್ಥ್ ಅವರ 25ಕ್ಕೂ ಹೆಚ್ಚು ಉದ್ಯಮ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲು ಆದೇಶಿಸಿದ್ದರು. ಅದರಂತೆ ಐಟಿ ಇಲಾಖೆ ದಾಳಿ ನಡೆಸಿತ್ತು. ದಾಳಿ ಬಳಿಕ ಸಿದ್ಧಾರ್ಥ್ ಅವರು ಐಟಿ ಇಲಾಖೆಗೆ ತೆರಿಗೆ ವಂಚನೆ ಮಾಡಿದ್ದಾರೆ ಮತ್ತು 650 ಕೋಟಿ ರೂಪಾಯಿಗೂ ಅಧಿಕ ವಹಿವಾಟಿಗೆ ತೆರಿಗೆ ಕಟ್ಟಿಲ್ಲ, ಸರಿಯಾದ ಲೆಕ್ಕಪತ್ರ ತೋರಿಸಿಲ್ಲ ಎಂದು ಹೇಳಲಾಗಿತ್ತು. 
ಇದೀಗ ಸಿದ್ಧಾರ್ಥ್ ಅವರ ಆತ್ಮಹತ್ಯೆ ಅವರ ಡೆತ್ ನೋಟ್, ಉದ್ಯಮ ಕ್ಷೇತ್ರದಲ್ಲಿನ ವಹಿವಾಟು, ಉದ್ಯಮಿಗಳ ಮೇಲೆ ಹಣಕಾಸು ಒತ್ತಡಗಳು, ಐಟಿ ಇಲಾಖೆ ಬಗ್ಗೆ ನೂರಾರು ಸಂದೇಹಗಳು, ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
SCROLL FOR NEXT