ರಾಜ್ಯ

ಸಿದ್ಧಾರ್ಥ್ ತವರು ಚಟ್ಟನ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ: ಕುಟುಂಬಸ್ಥರ ಹೇಳಿಕೆ

Srinivasamurthy VN
ಮಂಗಳೂರು: ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಪಾರ್ಥೀವ ಶರೀರ ಪತ್ತೆಯಾದ ಬೆನ್ನಲ್ಲೇ, ಅವರ ತವರು ಮೂಡಿಗೆರೆ ತಾಲೂಕಿನ ಚಟ್ಟನ ಹಳ್ಳಿಯಲ್ಲಿ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶೃಂಗೇರಿ ಶಾಸಕ ಜಿಡಿ ರಾಜೇಗೌಡ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಸಿದ್ಧಾರ್ಥ್ ಅವರ ತವರು ಮೂಡಿಗೆರೆ ತಾಲೂಕಿನ ಚಟ್ಟನ ಹಳ್ಳಿಯಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ. ಅಂತೆಯೇ ಚಿಕ್ಕಮಗಳೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಏರ್ಪಾಟು ಮಾಡಲಾಗುತ್ತಿದ್ದು, ಚಿಕ್ಕಮಗಳೂರಿನಲ್ಲಿ ಎಬಿಸಿ ಕಾಫಿ ಕ್ಯೂರಿಂಗ್ ಸೆಂಟರ್ ನಲ್ಲಿ ಸಿದ್ಧಾರ್ಥ್ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಹೇಳಿದ್ದಾರೆ.
ಕಾಫಿ ಎಸ್ಟೇಟ್ ನಲ್ಲಿಯೇ ಸಿದ್ಧಾರ್ಥ್ ಅವರ ತಾಯಿ ಮತ್ತು ಕುಟುಂಬಸ್ಥರಿದ್ದು, ಅವರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ಪ್ರಸ್ತುತ ಸಿದ್ಧಾರ್ಥ್ ಅವರ ಪಾರ್ಥೀವ ಶರೀರವನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಪಾರ್ಥೀವ ಶರೀರ ತರಲಾಗಿದ್ದು, ಅಲ್ಲಿ ನುರಿತ ವೈದ್ಯರ ತಂಡ ಸಿದ್ಧಾರ್ಥ್ ಅವರ ಪಾರ್ಥೀವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಸಿದ್ದಾರ್ಥ್ ಅವರ ನಿಧನ ಹಿನ್ನೆಲೆಯಲ್ಲಿ ದೇಶಾದ್ಯಂತ ಇರುವ ಕೆಫೆ ಕಾಫಿ ಡೇ ಔಟ್ ಲೆಟ್ ಗಳನ್ನು ಇಂದು ಮುಚ್ಚಲಾಗಿದ್ದು ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. 
SCROLL FOR NEXT