ರಾಜ್ಯ

ಸಾಲು ಮರದ ತಿಮ್ಮಕ್ಕ ಅವರ ಮನವಿಗೆ ಸ್ಪಂದಿಸಿದ ಸಿಎಂ: ಮರ ಕಡಿಯದಂತೆ ಅಧಿಕಾರಿಗಳಿಗೆ ಸೂಚನೆ

Raghavendra Adiga
ಬೆಂಗಳೂರು: ಕುಂದೂರು-ಹುಲಿಕಲ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಯೋಜನೆಗೆ ಬ್ರೇಕ್ ಬಿದ್ದಿದೆ. ಸೋಮವಾರ ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು  ಗೃಹ ಕಛೇರಿ ಕೃಷ್ಣದಲ್ಲಿ ಭೇಟಿ ಮಾಡಿದರು. ಈ ವೇಳೆ ಮಾಗಡಿ ತಾಲೂಕು ಕುದೂರು-ಹುಲಿಕಲ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ತಾನು ನೆಟ್ಟ ಸಾಲುಮರಗಳ ಕಡಿಯಲು ಮುಂದಾಗಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.
ಈ ತಕ್ಷಣ ಸಿಎಂ ಕುಮಾರಸ್ವಾಮಿ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ಮರಗಳನ್ನು ಕಡಿಯದಂತೆ ಆದೇಶಿಸಿದ್ದರೆ. ಅಲ್ಲದೆ ಅಗತ್ಯವಾದರೆ ರಸ್ತೆ ಮಾರ್ಗ ಬದಲಿಸುವಂತೆ ಸಹ ಸೂಚಿಸಿದ್ದಾರೆ.
ರಸ್ತೆ ಕಾಮಗಾರಿ ನೆಪದಲ್ಲಿ ತಿಮ್ಮಕ್ಕ ನೆಟ್ಟ ಸಾಲುಮರಗಳಿಗೆ ಕೊಡಲಿ ಏಟು ನೀಡಲು ಸರ್ಕಾರ ಮುಂದಾದ ಕುರಿತಂತೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಿಗೇ ಸಿಎಂ ಕುಮಾರಸ್ವಾಮಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. 
SCROLL FOR NEXT