ರಾಜ್ಯ

ಭಾರೀ ಮಳೆ-ಗಾಳಿಗೆ ಧರೆಗುರುಳಿದ ಮರಗಳು: 1 ಲಕ್ಷ ಸಸಿ ನೆಡಲು ಬಿಬಿಎಂಪಿ ಸಿದ್ಧತೆ

Shilpa D
ಬೆಂಗಳೂರು: ಇತ್ತೀಚೆಗೆ ಸುರಿದ ಭಾರೀ ಮಳೆ ಗಾಳಿಗೆ ನಗರದಲ್ಲಿ ಹಲವು ಬೃಹತ್ ಮರಗಳು ಧರೆಗುರುಳಿರುವ ಹಿನ್ನೆಲೆಯಲ್ಲಿ ನಗರಾದ್ಯಂತ 1 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ ನಿರ್ಧರಿಸಿದೆ.
ಈ ಸಂಬಂಧ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಂಗಳವಾರ ತಜ್ಞರ ಜೊತೆ ಸಭೆ ನಡೆಸಿ ಮರಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಿದರು. ಸಭೆಯ ನಂತರ ನಗರಾದ್ಯಂತ 1 ಲಕ್ಷ ಗಿಡ ನೆಡಲು ಸುಮಾರು 5 ಕೋಟಿ ರು. ಹಣ ವ್ಯಯಿಸುತ್ತಿದೆ. ಈಗಾಗಲೇ 75 ಸಾವಿರ ಗಿಡಗಳು ಸಿದ್ದವಾಗಿದೆ.
ಬಿಬಿಎಂಪಿ ಅರಣ್ಯ ಇಲಾಖೆ ಬೇವಿನ ಗಿಡ, ಹೊಂಗೆ ಗಿಡ, ಚಂಪಕ, ಪೊಂಗಂ, ಮಹೋಗನಿ, ನೇರಳೆ, ಸಂಪಿಗೆ ಮುಂತಾದ ಹಲವು ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದೆ. 
ಮೇ 25 ಮತ್ತು 26 ರಂದು ಸುರಿದ ಮಳೆಯಿಂದಾಗಿ 100 ಮರಗಳು ಬುಡ ಸಮೇತ ಉರುಳಿ ಬಿದ್ದಿವೆ, ಸುಮಾರು 80ಕ್ಕೂ ಹೆಚ್ಚು ಮರದ ರೆಂಬೆಗಳು ಬಿದ್ದ ಕಾರಣ ವಿದ್ಯುತ್ ಕಂಬಗಳು ಹಾಗೂ ಎಲೆಕ್ಟ್ರಿಕ್ ವೈರ್ ಗೆ ಹಾನಿಯಾಗಿದೆ,  ಹಲವು ವಾಹನಗಳು ಜಖಂ ಆಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಮರಗಳು ಉರುಳಿ ಬಿದ್ದ ಹಿನ್ನೆಲೆಯಲ್ಲಿ ಪರಿಸರ ಇಲಾಖೆ  ಹಾಗೂ ನಗರ ಸಂರಕ್ಷಣ ಇಲಾಖೆ ಜೊತೆ ಸಭೆ ನಡೆಸಿದ್ದಾಗಿ ಮೇಯರ್ ತಿಳಿಸಿದ್ದಾರೆ.
1ಲಕ್ಷ ಸಸಿ ನೆಡಲು ನಗರದ 8 ವಲಯಗಳಲ್ಲಿ ಟೆಂಡರ್ ಕರೆಯಲಾಗಿದೆ,  4 ವಲಯಗಳಿಗೆ ಈಗಾಗಲೇ ಅನುಮತಿ ನೀಡಲಾಗಿದೆ,. ಸರಿಯಾದ ರೀತಿಯಲ್ಲಿ ಸಸಿ ನೆಟ್ಟು ಅಗತ್ಯ ಕ್ರಮ ತೆಗೆದುಕೊಂಡು ಅವುಗಳನ್ನು ಪೋಷಿಸಿದರೇ ಮರಗಳು ಎಷ್ಟೇ ಮಳೆ ಗಾಳಿ ಬಂದರೂ ಜಗ್ಗುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕೆ ಚೋಳ ರಾಜು ಹೇಳಿದ್ದಾರೆ. 
SCROLL FOR NEXT