ಸಾಮೂಹಿಕ ವಿವಾಹದಲ್ಲಿ ಸಾಹಿತಿ ಕುಂ. ವೀ ಪುತ್ರನ ಅಂತರ್ಜಾತಿ ಮದುವೆ
ಚಿತ್ರದುರ್ಗ: ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ಅಂತರ್ಜಾತಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಂಬಾರ ಸಮುದಾಯದ ಪ್ರವರ ಅವರು ಬೆಸ್ತ ಸಮುದಾಯಕ್ಕೆ ಸೇರಿದ ಅಂಬಿಕಾ ಅವರನ್ನು ವರಿಸಿದ್ದಾರೆ.
ಯಾರನ್ನೋ ಮೆಚ್ಚಿಸಲು ಇಂತಹ ವಿವಾಹ ಮಾಡಿಕೊಂಡಿಲ್ಲ, ಇಬ್ಬರು ಚರ್ಚಿಸಿ ಪರಸ್ಪರ ಒಪ್ಪಿ ಸರಳ ವಿವಾಹವಾಗಿದ್ದೇವೆ ಎಂದು ವಧು ಅಂಬಿಕಾ ತಿಳಿಸಿದ್ದಾರೆ.
ಇದೇ ವೇಳೆ ಒಟ್ಟು 45 ಜೋಡಿಗಳು ವಿವಾಹವಾಗಿದ್ದು, 6 ಅಂತರ್ಜಾತಿ ವಿವಾಹಗಳು ನೆರವೇರಿದವು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos