ರಾಜ್ಯ

ಸುಳ್ಳು ಸುದ್ದಿ ಪ್ರಸಾರ: ಪಬ್ಲಿಕ್ ಟಿವಿ ವರದಿಗಾರನ ಮೇಲೆ ಬಿತ್ತು ಕೇಸ್!

Shilpa D
ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣ ದೇವರಾಯ ವಿವಿ ಕುಲಪತಿ ಪ್ರೊಯ ಎಂ.ಎಸ್ ಸುಭಾಷ್ ಅವರು ನೀಡಿದ ದೂರಿನ ಅನ್ವಯ ಖಾಸಗಿ ಚಾನೆಲ್ ವರದಿಗಾರ ಮತ್ತು ಆತನ ಜೊತೆಗಿದ್ದ ಇಬ್ಬರಿಗೆ ಬಳ್ಳಾರಿ ಪೊಲೀಸರು ಸಮಸ್ಸ್ ನೀಡಿದ್ದಾರೆ,.
ಪಬ್ಲಿಕ್ ಟಿವಿ ವರದಿಗಾರ ವಿರೇಶ್ ದಾನಿ, ಮತ್ತೊಬ್ಬ ಸ್ಖಳೀಯ ಚಾನೆಲ್ ವರದಿಗಾರ ಮತ್ತು ಬೋಧಕೇತರ ಸಿಬ್ಬಂದಿ ಕೆಲಸಕ್ಕೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದ ಮಂಜುನಾಥಯ್ಯ ಎಂಬುವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದೆ.,
ನೇಮಕಾತಿಗೆ ಅರ್ಜಿ ಸಲ್ಲಿಸಿದವರು ವಿವಿ  ವೆಬ್ ಸೈಟ್ ನಲ್ಲಿ ಪ್ರವೇಶ ಪತ್ರ ಡೌನ್ ಲೋಡ್ ಮಾಡಿನಕೊಂಡು ಅದಕ್ಕೆ ತಮ್ಮ ಭಾವಚಿತ್ರ ಅಂಟಿಸಿಕೊಳ್ಳಬೇಕಿತ್ತು.ಆರೋಪಿ ಮಂಜುನಾಥ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಂಡು ಜೆರಾಕ್ಸ್ ಮಾಡಿಸಿದ್ದ, ಒದರಲ್ಲಿ ಸಿಎಂ ಹಾಗೂ ರಾಜ್ಯಪಾಲರ ಪೋಟೋ ಅಂಟಿಸಿ ನಕಲಿ ದಾಖಲೆ ಸೃಷ್ಠಿಸಿದ್ದ.
ಯಾರೂ ಬೇಕಾದರೂ ಪರೀಕ್ಷೆ ಬರೆಯಬಹುದಾದ ಅವ್ಯವಸ್ಥೆ ವಿವಿಯಲ್ಲಿದೆ ಎಂಬ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು.
ವರದಿಯ ಸತ್ಯಾಸತ್ಯತೆ ಪರೀಶೀಲಿಸದೇ ಸುದ್ದಿ ಬಿತ್ತರಿಸಿದ ಪಬ್ಲಿಕ್ ಟಿವಿ ವರದಿಗಾರ ಮತ್ತು ಆತನ ಜೊತೆಗಿದ್ದ ಇಬ್ಬರ ವಿರುದ್ಧ ದೂರು ದಾಖಲಾಗಿದೆ ಎಂದು ಬಳ್ಳಾರಿ ಎಸ್ ಪಿ ಲಕ್ಷ್ಮಣ್ ನಿಂಬರಗಿ ಹೇಳಿದ್ದಾರೆ,
SCROLL FOR NEXT