ಕೋಲಾರ ಎಸ್ಪಿಯನ್ನೇ ಬಂಧಿಸಲು ಹೇಳಿ ನಂತರ ಆದೇಶ ವಾಪಾಸ್ ಪಡೆದ ಹೈಕೋರ್ಟ್
ಕೋಲಾರ: ಪ್ರಕರಣವೊಂದರ ಸಂಬಂಧ ಕೋಲಾರ ಪೋಲೀಸ್ ವರಿಷ್ತಾಧಿಕಾರಿ ರೋಹಿಣಿ ಸೆಪಟ್ ಕಟೋಚ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್ ಕೆಲ ಸಮಯದ ಬಳಿಕ ಆದೇಶವನ್ನು ಹಿಂಪಡೆದಿದೆ.
ಶುಕ್ರವಾರ ಹೈಕೋರ್ಟ್ ಎಸ್ಪಿ ವಿರುದ್ಧದ ಬಂಧನ ವಾರಂಟ್ ಆದೇಶ ಹೊರಡಿಸಿ ಹಿಂಪಡೆದಿದೆ. ಸದರಿ ಪ್ರಕರಣದ ಸಂಬಂಧ ಕೋಲಾರ ಉಪ ವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಅವರುಗಳನ್ನು ಬಂಧಿಸಿ ವಿಚಾರಣೆಗೆ ಒಲಪಡಿಸುವಂತೆ ನ್ಯಾಯಾಲಯ ಆದೇಶಿಸಿತ್ತು.
ಆದರೆ ಎಸ್ಪಿ ರೋಹಿಣಿಯವರು ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ರೋಹಿಣಿ ವಿರುದ್ಧವೇ ಹೈಕೋರ್ಟ್ ಬಂಧನದ ವಾರಂಟ್ ಹೊರಡಿಸಿತ್ತು. ವಿಚಾರ ತಿಳಿದ ಎಸ್ಪಿ ರೋಹಿಣಿ ಮಧ್ಯಾಹ್ನದ ವೇಳೆಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದಾರೆ. ಇದರಿಂದ ರೋಹಿಣಿಯವರನ್ನು ಮನ್ನಿಸಿದ ನ್ಯಾಯಾಲಯ ಅವರ ವಿರುದ್ಧದ ಬಂಧನ ಆದೇಶವನ್ನು ಹಿಂಪಡೆದಿದೆ
ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಕೋಲಾರ ಎಸ್ಪಿ ಪರ ನ್ಯಾಯಾಲಯಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟ್ ತನ್ನ ಆದೇಶ ಹಿಂಪಡೆದಿದ್ದು ಅರ್ಜಿದಾರರ ಭೂಮಿಗೆ ಪರಿಹಾರ ನೀಡಬಹುದಾದ ಮೊತ್ತದ ಬಗ್ಗೆ ಪರಿಶೀಲಿಸಿ ಜೂನ್ 14ಕ್ಕೆ ವರದಿ ಸಲ್ಲಿಸುವಂತೆ ಕೋಲಾರದ ಜಿಲ್ಲಾ ಪಂಚಾಯತ್ ಸಿಇಒಗೆ ನಿರ್ದೇಶನ ನೀಡಿದೆ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics