ರಾಜ್ಯ

ಜೂ.21ರಂದು ಲಾಲ್ ಬಾಗ್ ನಲ್ಲಿ 50 ವಿದೇಶಿ ಪ್ರವಾಸೋದ್ಯಮ ರಾಯಭಾರಿಗಳಿಂದ ಯೋಗಾಭ್ಯಾಸ

Sumana Upadhyaya
ಬೆಂಗಳೂರು: ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವಾಲಯ ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಯೋಗಭ್ಯಾಸ ಮಾಡುವ 50 ಅಂತಾರಾಷ್ಟ್ರೀಯ ನಿಯೋಗಗಳನ್ನು ನಗರಕ್ಕೆ ತರುತ್ತಿದೆ.
15 ದೇಶಗಳ ನಿಯೋಗ ಪ್ರತಿನಿಧಿಗಳು ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಪ್ರವಾಸೋದ್ಯಮ ಅವಕಾಶಗಳನ್ನು ಜನಪ್ರಿಯಗೊಳಿಸಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಮೊಹಮ್ಮದ್ ಫಾರೂಕ್ ತಿಳಿಸಿದ್ದಾರೆ.
15 ದೇಶಗಳ ಪ್ರತಿನಿಧಿಗಳು ಯೋಗ ದಿನದಂದು ಲಾಲ್ ಬಾಗ್ ನಲ್ಲಿ ನಡೆಯಲಿರುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ ಜಿಗಣಿಯ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಮತ್ತು ತುಮಕೂರು ರಸ್ತೆಯಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಕರ್ನಾಟಕದಲ್ಲಿ ಸಾಕಷ್ಟು ಕ್ಷೇತ್ರ ಪ್ರವಾಸೋದ್ಯಮ ಸ್ಥಳಗಳಿವೆ. ಕಾರವಾರ, ಬೆಂಗಳೂರು, ಗೋಕರ್ಣ, ಉಡುಪಿ ಮೊದಲಾದ ಕೇಂದ್ರಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಾಧ್ಯತೆಯಿದೆ. ನಿಯೋಗದಲ್ಲಿ ಪ್ರವಾಸ ನಿರ್ವಾಹಕರು, ಮಾಧ್ಯಮ ಪ್ರತಿನಿಧಿಗಳು, ಬ್ಲಾಗರ್ ಗಳು ಇರುತ್ತಾರೆ ಎಂದು ಮೊಹಮ್ಮದ್ ಫಾರೂಕ್ ತಿಳಿಸಿದರು.
SCROLL FOR NEXT