ವಿ. ಸೋಮಣ್ಣ 
ರಾಜ್ಯ

ಚುನಾವಣೆ ವೇಳೆ ಕಾಶೀಯಾತ್ರೆ ಭರವಸೆ ಕೊಟ್ಟು ಮರೆತ ಮಾಜಿ ಸಚಿವ ಸೋಮಣ್ಣ!

ರಾಜಕಾರಣಿಗಳೂ ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆಗಳನ್ನು ಒಮ್ಮೆ ಮತದಾನ ಮುಗಿದ ನಂತರ ಜಾರಿಗೆ ತರಲು ಮರೆಯುವುದು ಸಾಮಾನ್ಯ್. ಅದಕ್ಕೆ ಬಿಜೆಪಿ ನಾಯಕ ವಿ. ಸೋಮಣ್ಣ...

ಬೆಂಗಳೂರು: ರಾಜಕಾರಣಿಗಳೂ ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆಗಳನ್ನು ಒಮ್ಮೆ ಮತದಾನ ಮುಗಿದ ನಂತರ ಜಾರಿಗೆ ತರಲು ಮರೆಯುವುದು ಸಾಮಾನ್ಯ್. ಅದಕ್ಕೆ ಬಿಜೆಪಿ ನಾಯಕ ವಿ. ಸೋಮಣ್ಣ ಸಹ ಹೊರತಲ್ಲ. ಆದರೆ ಈಗ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ನಿಡಿದ್ದ ಭರವಸೆಯನ್ನೇ ಮರೆತು ಪೇಚಿಗೆ ಸಿಕ್ಕಿದ್ದಾರೆ. ಒಂದೊಮ್ಮೆ ತುಮಕೂರಿನಲ್ಲಿ ದೇವೇಗೌಡರು ಸೋತರೆ ಆಗ ಬಿಜೆಪಿ ಗೆಲುವಿಗೆ ಕಾರಣವಾಗಿದ್ದ ತುಮಕೂರು ನಗರ ಕಾರ್ಪೊರೇಶನ್‌ನ ಬಿಜೆಪಿ ಕಾರ್ಪೊರೇಟರ್‌ಗಳಿಗೆ ವಾರಾಣಾಸಿಗೆ ಪ್ರವಾಸ ಕರೆದೊಯ್ಯುವುದಾಗಿ ಹೇಳಿ ಈಗ ತಾವು ನೀಡಿದ್ದ ಭರವಸೆ ಈಡೇರುಸುವುದನ್ನೇ ಮರೆತಿದ್ದಾರೆ.
ಪಕ್ಷದ 12 ಕಾರ್ಪೋರೇಟರ್‌ಗಳು ಮಾತ್ರವಲ್ಲದೆ ಅವರ ಕೆಲವು ಸ್ನೇಹಿತರೂ ಸಹ - ಜಿ ಎಸ್ ಬಸವರಾಜು ಅವರ ಗೆಲುವುಗಾಗಿ ಹಗಲಿರುಳು ಶ್ರಮಿಸಿದ್ದಾರೆ.ಹಾಗಾಗಿ ದೇವೇಗೌಡರು ಸೋಲೊಪ್ಪಬೇಕಾಗಿ ಬಂದಿದೆ. ಮತ್ತು ಈಗ ಅವರು ಸೋಮಣ್ಣ ಅವರಿಗೆ ಅವರೇ ಕೊಟ್ಟಿದ್ದ ಕಾಶಿ ಪ್ರವಾಸದ ಭರವಸೆಯನ್ನು ನೆನಪಿಸಿಕೊಡುತ್ತಿದ್ದಾರೆ. ತುಮಕೂರು ನಗರದಲ್ಲಿ ಬಸವರಾಜು ಅವರಿಗೆ  10,000 ಕ್ಕೂ ಹೆಚ್ಚು ಮತಗಳ ಮುನ್ನಡೆ ದೊರಕಿತ್ತು.
ಪಿಎಂ ನರೇಂದ್ರ ಮೋದಿ ಹೊರತುಪಡಿಸಿ ಬೇರೆ ಯಾರೂ ಪ್ರತಿನಿಧಿಸದ ವಾರಣಾಸಿಗೆ ಪ್ರವಾಸ ಕೈಗೊಳ್ಳಬೇಕು ಎಂದು ಕಾರ್ಪೊರೇಟರ್‌ಗಳು ಮತ್ತು ಬಿಜೆಪಿ ಕಾರ್ಯಕರ್ತರು ಹುರುಪಿನಲ್ಲಿದ್ದಾರೆ. "ನಾವು ಕಾತುರರಾಗಿದ್ದೇವೆ. ಈ ಬಗ್ಗೆ ವಿ. ಸೋಮಣ್ಣನವರಿಗೆ ಜ್ಞಾಪಕ ಮಾಡಿಕೊಡುತ್ತಿದ್ದೇವೆ" ಅವರಲ್ಲೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT