ರಾಜ್ಯ

ಲಂಚದ ಆರೋಪ: ಎಸಿಬಿ ಅಧಿಕಾರಿಗಳಿಂದ ಪುತ್ತೂರು ತಹಶೀಲ್ದಾರ್ ಬಂಧನ

Raghavendra Adiga
ಪುತ್ತೂರು: ಕ್ಯಾಟರಿಂಗ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಅಧಿಕಾರಿಗಳಿಗೆ ಊಟ, ಉಪಹಾರ ಸರಬರಾಜು ಮಾಡಿದ್ದ ಪುತ್ತೂರಿನ ಪೈ ಕ್ಯಾಟರಿಂಗ್ ಅವರಿಂದ ತಹಶೀಲ್ದಾರ್ 1.20 ಲಕ್ಷ. ಲಂಚ ಸ್ವೀಕರಿಸುತ್ತಿದ್ದರು ಎನ್ನಲಾಗಿದ್ದು ಎಸಿಬಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಲಂಚದ ಹಣದ ಸಮೇತ ತಹಶೀಲ್ದಾರ್ ಅವರನ್ನು ಬಂಧಿಸಿದ್ದಾರೆ.
ಕ್ಯಾಟರಿಂಬ್ ಬಿಲ್ 9.37 ಲಕ್ಷ ರು. ಬಿಲ್ ಪಾಸು ಮಾಡಬೇಕಾಗಿದ್ದ ತಹಶೀಲ್ದಾರ್ ಕ್ಯಾಟರಿಂಗ್ ಮಾಲೀಕರಿಂದ ಲಂಚ ಕೇಳಿದ್ದಾರೆ. ಈ ಸಂಬಂಧ ಕ್ಯಾಟರಿಂಗ್ ಮಾಲೀಕ ಎಸಿಬಿ ಅಧಿಕಾರಿಗಳಿಗೆ ದೂರಿತ್ತಿದ್ದಾರೆ.
ಗುರುವಾರ ಸಂಜೆ ಎಸಿಬಿ ಅಧಿಕಾರಿಗಳು ತಹಶೀಲ್ದಾರರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಮಂಗಳುರಿಗೆ ಕರೆದೊಯ್ಯಲಾಗಿದೆ ಎಂದು ಮಾದ್ಯಮ ವರದಿ ಹೇಳಿದೆ.
SCROLL FOR NEXT