ರಾಜ್ಯ

ಬೆಂಗಳೂರು: ಬಾಕಿ ವೇತನಕ್ಕಾಗಿ ಒತ್ತಾಯಿಸಿ ಹೆಚ್ ಎಎಲ್ ನೌಕರರ ಉಪವಾಸ ಸತ್ಯಾಗ್ರಹ

Nagaraja AB
ಬೆಂಗಳೂರು: ಇತರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇರುವಂತೆ ಸಮಾನವಾದ ವೇತನ ನೀಡಬೇಕು ಹಾಗೂ ಬಾಕಿ ವೇತನವನ್ನು ಪಾವತಿಸುವಂತೆ ಒತ್ತಾಯಿಸಿ ಹಿಂದೂಸ್ತಾನ್ ಏರೋನಾಟಿಕ್ಸ್  ಲಿಮಿಟೆಡ್ ನ ಸುಮಾರು 500 ನೌಕರರು ಮಂಗಳವಾರದಿಂದ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
2017ರಿಂದಲೂ ವೇತನ ಪಡೆದಿಲ್ಲ ಈ ಹಿನ್ನೆಲೆಯಲ್ಲಿ  ಏಳು ರಾಜ್ಯಗಳ 9 ಘಟಕಗಳಲ್ಲಿ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ನಡೆಸುತ್ತಿರುವುದಾಗಿ ಎಲ್ಲಾ ಯೂನಿಯನ್ ಗಳ ಮುಖ್ಯ ಸಂಘಟಕ ಸೂರ್ಯದೇವರಾ ಚಂದ್ರಶೇಖರ್  ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಕಾರ್ಯನಿರ್ವಾಹಕರು ಪಡೆದಂತೆ ನಮಗೂ ವೇತನ ಪಾವತಿಸಲು ಆಡಳಿತಾ ಮಂಡಳಿ ಮುಂದೆ ಬರುತ್ತಿಲ್ಲ. ನವೆಂಬರ್ 2017ರಲ್ಲಿ ಕಾರ್ಯನಿರ್ವಹಕರಿಗೆ ವೇತನ ಸಮಸ್ಯೆ ಬಗೆಹರಿಸಲಾಗಿದೆ. ನಮ್ಮೊಂದಿಗೆ ಮಾತುಕತೆ ನಡೆಯುತ್ತಿದೆ ಆದರೆ, ಫಲಾಪ್ರಧವಾಗಿಲ್ಲ ಎಂದು ಯೂನಿಯನ್ ಮುಖಂಡರು ಹೇಳಿದ್ದಾರೆ.
ಆದಾಗ್ಯೂ,ಉದ್ದೇಶಪೂರ್ವಕವಾಗಿ ವೇತನ ಇತ್ಯರ್ಥವನ್ನು ವಿಳಂಬ ಮಾಡುತ್ತಿದೆ ಮತ್ತು ಅವರಿಗೆ ನೀಡಲಾಗುವ ಸೌಕರ್ಯಗಳು  ಅಲ್ಪವಾಗಿವೆ ಎಂಬ ಒಕ್ಕೂಟಗಳ ಆರೋಪ ನಿಜವಾಗಿಲ್ಲ. ಈ ಸಂಬಂಧ ಈಗಾಗಲೇ ಒಂಬತ್ತು ಸುತ್ತಿನ ಚರ್ಚೆಗಳು ನಡೆದಿವೆ ಎಂದು ಹೆಚ್ ಎಎಲ್ ಆಡಳಿತ ಮಂಡಳಿ  ಹೇಳಿದೆ. 
ಕಾರ್ಯನಿರ್ವಾಹಕರ ವೇತನ ಪರಿಷ್ಕರಣೆ 2017 ರ ಜನವರಿ 1 ರಿಂದ ಜಾರಿಗೆ ಬಂದಾಗ, ಅಧಿಕಾರಿಗಳಂತೆ  ಸಮನಾಗಿ ಅಥವಾ ಹೆಚ್ಚಿನದನ್ನು ಫಿಟ್‌ಮೆಂಟ್ ಬೆನಿಫಿಟ್ ಮತ್ತು ಭತ್ಯೆಗಳಂತಹ ಪ್ರಯೋಜನಗಳನ್ನು ವಿಸ್ತರಿಸುವ ಒಕ್ಕೂಟಗಳ ಬೇಡಿಕೆಯಲ್ಲಿ ಯಾವುದೇ ಸಮರ್ಥನೆ ಮತ್ತು ತಾರ್ಕಿಕತೆಯಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. 
SCROLL FOR NEXT