ರಾಜ್ಯ

ಧಾರವಾಡ: 15 ವರ್ಷಗಳ ನಂತರ ಮತ್ತೆ ಆರಂಭವಾಗಲಿದೆ ಜೈಲು ಕಾರ್ಖಾನೆ

Lingaraj Badiger
ಧಾರವಾಡ: ಮೂಲ ಸೌಕರ್ಯಗಳ ಕೊರತೆ ಹಿನ್ನಲೆಯಲ್ಲಿ ಬಂದ್ ಆಗಿದ್ದ ಧಾರವಾಡ ಕೇಂದ್ರ ಕಾರಾಗೃಹದ ಪೀಠೋಪಕರಣ ಕಾರ್ಖಾನೆ 15 ವರ್ಷಗಳ ನಂತರ ಮತ್ತೆ ಆರಂಭವಾಗುತ್ತಿದೆ.
ಕೈದಿಗಳಿಂದಲೇ ಈ ಪೀಠೋಪಕರಣ ಕಾರ್ಖಾನೆ ನಡೆಯಲಿದ್ದು, ಇಲ್ಲಿ ತಯರಾದ ಪಿಠೋಪಕರಣಗಳನ್ನು ಹೊರಗಡೆ ಮಾರಾಟ ಮಾಡಲಾಗುತ್ತದೆ.
ಕಟ್ಟಿಗೆ ಕತ್ತರಿಸಲು ಮತ್ತು ಪಿಠೋಪಕರಣಗಳ ವಿನ್ಯಾಸಕ್ಕಾಗಿ ಹಲವು ಯಂತ್ರಗಳನ್ನು ಇಲ್ಲಿ ಬಳಸಲಾಗುತ್ತಿದ್ದು, ಡೈನಿಂಗ್ ಟೇಬಲ್, ಟೀಪಾಯ್, ಮಂಚ, ಕುರ್ಚಿ ಸೇರಿದಂತೆ ಹಲವು ಪಿಠೋಪಕರಣಗಳನ್ನು ತಯಾರಿಸಲಾಗುತ್ತದೆ.
ಕಳೆದ ಹಲವು ವರ್ಷಗಳಿಂದ ಈ ಕಾರ್ಖಾನೆ ಬಂದ್ ಆಗಿದ್ದು, ಈಗ ಅದನ್ನು ಮತ್ತೆ ಆರಂಭಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಇತರೆ ಕೈದಿಗಳಿಗೆ ತೊಂದರೆಯಾಗದಂತೆ ಈ ಕಾರ್ಖಾನೆ ನಡೆಸಲಾಗುವುದು ಎಂದು ಜೈಲು ಅಧೀಕ್ಷಕಿ ಅನಿತಾ ಆರ್ ಅವರು ತಿಳಿಸಿದ್ದಾರೆ.
ಕಾರ್ಖಾನೆ ಆರಂಭಿಸುವುದಕ್ಕಾಗಿ 100 ಕೈದಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಸಣ್ಣ ಪುಟ್ಟ ತಾಂತ್ರಿಕ ಕೆಲಸಗಳು ಬಾಕಿ ಇದ್ದು, ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸಲಾಗುವುದು ಎಂದು ಅನಿತಾ ಹೇಳಿದ್ದಾರೆ.
SCROLL FOR NEXT