ರಾಜ್ಯ

ಮೈಸೂರು ಪ್ರಾಣಿ ಸಂಗ್ರಹಾಲಯದ ಪ್ರವೇಶ ದರ ಹೆಚ್ಚಳ

Lingaraj Badiger
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಪ್ರವಾಸಿ ತಾಣವಾದ ಪ್ರಾಣಿ ಸಂಗ್ರಹಾಲಯದ ಪ್ರವೇಶ ದರ ಹೆಚ್ಚಿಸಿ ಅಲ್ಲಿನ ಆಡಳಿತ ಮಂಡಳಿ ಆದೇಶ ಹೊರಡಿಸಿದೆ. 
ಇದರಿಂದ ಸಂಗ್ರಹಾಲಯದ ಪ್ರವೇಶ ದರ ವಯಸ್ಕರಿಗೆ ವಾರದ ದಿನಗಳಲ್ಲಿ ಹಿಂದೆ ನಿಗದಿಯಾಗಿದ್ದ 60 ರಿಂದ 80 ರೂ., ವಾರಾಂತ್ಯದಲ್ಲಿ 80 ರಿಂದ 100 ರೂ.ಗಳಿಗೆ ಹೆಚ್ಚಾಗಿದೆ. ಮಕ್ಕಳಿಗೆ ವಾರದ ದಿನಗಳಲ್ಲಿ 30 ರಿಂದ 40 ರೂ. ಹಾಗೂ ವಾರಾಂತ್ಯದಲ್ಲಿ 40 ರಿಂದ 50 ರೂ.ಗಳಿಗೆ ಹೆಚ್ಚಿಸಲಾಗಿದೆ. 
ಈ ಕುರಿತು ವಿವರ ನೀಡಿರುವ ಪ್ರಾಣಿ ಸಂಗ್ರಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ದರ ಪರಿಷ್ಕರಣೆಯ ಪ್ರಸ್ತಾವನೆಯನ್ನು ಆಡಳಿತ ಮಂಡಳಿ ಮುಂದಿರಿಸಿ ಅನುಮೋದನೆ ಪಡೆಯಲಾಗಿದೆ. ಪ್ರವೇಶ ದರಗಳ ಕ್ರೋಢೀಕರಣದಿಂದ ಪ್ರಾಣಿ ಸಂಗ್ರಹಾಲಯದ ಅಭಿವೃದ್ಧಿ, ಪ್ರಾಣಿಗಳಿಗೆ ಸೂಕ್ತ ಆಹಾರ ಪೂರೈಕೆ, ಪ್ರಾಣಿಗಳ ವಿನಿಮಯ ಪ್ರಕ್ರಿಯೆ ಹಾಗೂ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪ್ರಯಾಣಿಕರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸಲು ನೆರವಾಗಲಿದೆ ಎಂದರು. 
ಪ್ರಾಣಿಗಳ ನಿರ್ವಹಣೆಯ ವೆಚ್ಚ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಅವುಗಳ ನಿರ್ವಾಹಕರ ವೇತನವನ್ನು ಕೂಡ ಕಾಲಕಾಲಕ್ಕೆ ಹೆಚ್ಚಿಸಬೇಕಿದೆ. ಪ್ರಾಣಿಗಳ ವಿನಿಮಯ ಕಾರ್ಯಕ್ರಮದಡಿ ಗುಜರಾತ್ ನ ಐದು ಸಿಂಹಗಳನ್ನು ತರಲು ಮುಂದಾಗಿದ್ದು, ಅವುಗಳ ಸ್ಥಳಾಂತರಕ್ಕೆ ಹೆಚ್ಚಿನ ಹಣ ಬೇಕಾಗುತ್ತದೆ ಎಂದರು.
SCROLL FOR NEXT