ರಾಜ್ಯ

'ಸರ್ಕಾರಿ ಶಾಲೆ' ಎಂದು ಮೂಗು ಮುರಿಯುವವರಿಗೆ ಬೆಂಗಳೂರಿನ ಗವರ್ನಮೆಂಟ್ ಸ್ಕೂಲ್ ಮಾದರಿ!

Shilpa D
ಬೆಂಗಳೂರು: ಬೆಂಗಳೂರಿನ ವಸಂತನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಜನ ಸಂದಣಿಯಿಂದ ಕೂಡಿತ್ತು ಶಾಲೆಯ ಆವರಣ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ತುಂಬಿತ್ತು.
ಸುಮಾರು 25 ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಿಸಿಲಾಗಿತ್ತು. ಹೀಗಾಗಿ ಈ ಶಾಲೆಯ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 280 ತಲುಪಿದೆ. ಶಾಲೆಯಲ್ಲಿ ದಾಖಲಾತಿ ಪ್ರಮಾಣದಲ್ಲಿ ಹೆಚ್ಚಳವಾಗಲು ಶಾಲೆಯ ಮುಖ್ಯೋಪಾಧ್ಯಾಯ ಕೆವಿ ಸುದರ್ಶನ್ ಕಾರಣ.ಅವರು ಮಾಡಿದ ಹಲವು ಬದಲಾವಣೆಗಳಿಂದಾಗಿ ಶಾಲೆ ಉತ್ತಮವಾಗಿ ರೂಪಾಂತರಗೊಂಡಿದೆ, ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಎಲ್ಲಾ ರೀತಿಯ ಉಪಕರಣಗಳನ್ನು ತಂದಿರಿಸಿದ್ದಾರೆ.
ಹಳೇಯ ವಿದ್ಯಾರ್ಥಿ ಸಂಘದ ಜೊತೆಗೆ ಹಲವು ಮಂದಿ  ಶಾಲೆಗೆ ದೇಣಿಗೆ ನೀಡಿದ್ದಾರೆ,.2018ರಲ್ಲಿ ರೋಟರಿ ಆರ್ಕ್ಯಾಡ್ ಕ್ಲಬ್ ಜೊತೆಗೂಡಿ 11 ತಿಂಗಳಲ್ಲಿ 19 ಕೊಠಡಿಗಳಿರುವ ಮೂರಿ ಮಹಡಿಯುಳ್ಳ ಕಟ್ಟಡ ಕಟ್ಟಿಸಲಾಯಿತು. ಐದು ಲ್ಯಾಬೋರೇಟರಿ, ಡೈನಿಂಗ್ ಹಾಲ್, ಅಡುಗೆ ಮನೆ, ಆಟದ ಮೈದಾನ ಹಾಗೂ ಕಂಪ್ಯೂಟರ್ ರೂಂ ನಿರ್ಮಿಸಲಾಯಿತು.
ಕಳೆದ ವರ್ಷ 160 ವಿದ್ಯಾರ್ಥಿಗಳಿದ್ದರು. ಈ ವರ್ಷ ಕಟ್ಟಡ ಪೂರ್ಣಗೊಂಡ ನಂತರ 280 ಕ್ಕೆ ಏರಿದೆ, 810 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯಬಹುದಾಗಿದೆ, ಮುಂದಿನ 2ತಿಂಗಳಲ್ಲಿ ಇನ್ನೂ 500 ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆಯಿದೆ ಎಂದು ಹೆಡ್ ಮಾಸ್ಟರ್ ತಿಳಿಸಿದ್ದಾರೆ.
ಈ ಶಾಲೆಯಲ್ಲಿ ಕನ್ನಡ ಮತ್ತು ತಮಿಳು ಮಾಧ್ಯಮಗಳಲ್ಲಿ ಬೋಧಿಸಲಾಗುತ್ತದೆ. ಜೊತೆಗೆ ಈ ವರ್ಷದಿಂದ ಆಂಗ್ಲ ಮಾಧ್ಯಮ ಕೂಡ ಆರಂಭಿಸಲಾಗುತ್ತಿದೆ, 1920 ರಲ್ಲಿ ಈ ಶಾಲೆಯನ್ನು ಬ್ರಿಟಿಷರು ಆರಂಭಿಸಿದರು. 1926 ರಲ್ಲಿ ತಮಿಳು ಶಾಲೆ ಪ್ರಾರಂಭಿಸಲಾಯಿತು.
ಈ ಶಾಲೆ ಐಐಎಸ್ಸಿ ಜೊತೆ ಟೈಅಪ್ ಮಾಡಿಕೊಂಡಿದೆ, ಶನಿವಾರ ಅಲ್ಲಿನ ವಿಜ್ಞಾನಿಗಳು ಬಂದು ಇಲ್ಲಿ ಮಕ್ಕಳಿಗೆ ವಿಜ್ಞಾನ ಪಾಠ ಮಾಡುತ್ತಾರೆ,. ಇದೊಂದು ಆಕರ್ಷಣೆಯಾಗಿದೆ, ಸ್ಥಳೀಯ ಶಾಸಕರು ಹಾಗೂ ಕೌನ್ಸಿಲರ್ ಗಳು ಈ ಶಾಲೆಗೆ ಮಕ್ಕಳನ್ನು ಶಿಫಾರಸ್ಸು ಮಾಡುತ್ತಿರುವುದು ಅಲ್ಲಿನ ಶಿಕ್ಷಕರಿಗೆ ಅಚ್ಚರಿ ಮೂಡಿಸಿದೆ. 
ಶಾಲೆಯ ಕಟ್ಟಡ ಖಾಸಗಿ ಶಾಲೆಯಂತೆ ಹೈಟೆಕ್ ಆಗಿದೆ, ಎಲ್ಲಾ ರೀತಿಯ ಸೌಲಭ್ಯಗಳಿವೆ, ಹಾಗಾಗಿ ಹೆಚ್ಚಿನ ಪೋಷಕರು ಈ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದಾಗುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
SCROLL FOR NEXT