ರಾಜ್ಯ

ಚಿಕ್ಕಮಗಳೂರು: ಜಲಪಾತದ ಸೌಂದರ್ಯಕ್ಕೆ ಮಾರಕವಾಯ್ತು ಭಕ್ತರು ಎಸೆದ ಬಟ್ಟೆಗಳ ರಾಶಿ

Raghavendra Adiga
ಚಿಕ್ಕಮಗಳೂರು: ಸಾಮಾನ್ಯವಾಗಿ ಜಲಪಾತಗಳು ಪ್ರವಾಸೀ ತಾಣಗಳಾಗಿ ಸಾಕಷ್ಟು ಜನರಿಗೆ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ಮಳೆಗಾಲದ ಈ ದಿನಗಳಲ್ಲಿ ನಾಡಿನಾದ್ಯಂತ ಜಲಪಾತಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಈ ನಡುವೆ ಚಿಕ್ಕಮಗಳೂರು ಜಿಲ್ಲೆ ಬಾಬಾಬುದಂಗಿರಿ ಬೆಟ್ಟಗಳ ಮಾಣಿಕ್ಯಧಾರ ಜಲಪಾತ ಸಮೀಪ ಧಿಕಾರಿಗಳು ಒಂದು ವಿಶಿಷ್ಟವಾದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅದೆಂದರೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ನೀರಿನಲ್ಲಿ ಸ್ನಾನ ಮಾಡಿದ ನಂತರ ಬಟ್ಟೆಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.
ಬಟ್ಟೆಗಳನ್ನು ನೀರಲ್ಲಿ ಅದ್ದಿ ಎಸೆದದ್ದಾದರೆ ಅವು ತಮ್ಮ ಕೆಟ್ಟ ಕರ್ಮಗಳನ್ನು ತೊಡೆದು ಹಾಕಲಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಸ್ವಚ್ಚತಾ ಟ್ರಸ್ಟ್ ನ ಸದಸ್ಯರು ಡಾ.ಶೋಭಾ ವಿಜಯಕುಮಾರ್ ಮತ್ತು ಡಾ.ಗೀತಾ ನೇತೃತ್ವದಲ್ಲಿ  ಇಲ್ಲಿನ ಕಸವನ್ನು ತೆರವು ಮಾಡಿದ್ದರು. ಆದರೆ ಈಗ ಮತ್ತೆ ಬಟ್ಟೆಗಳು ರಾಶಿ ಬಿದ್ದಿವೆ.
ಇದುವರೆಗೆ ಈ ಪ್ರದೇಶದಿಂದ ಟನ್ ಗಟ್ಟಲೆ ಬಟ್ಟೆಗಳನ್ನು ಸಂಗ್ರಹಿಸಲಾಗಿದೆ.ಇನ್ನು ಸಂದರ್ಶಕರು ಇಲ್ಲಿ ಬಟ್ಟೆಗಳನ್ನು ಎಸೆದಿದ್ದಾದರೆ ಅಂತಹವರಿಗೆ 50 ರು. ದಂಡ ವಿಧಿಸಲಾಗುವುದು ಎಂದು ಆಡಳಿತ ಮಂಡಳಿ ಎಚ್ಚರಿಸಿದೆ. ಎಸೆಯಲಾಗಿರುವ ಬಟ್ಟೆಗಳನ್ನು ತೆಗೆದು ಸ್ವಚ್ಚಗೊಳಿಸಲು ಗುತ್ತಿಗೆದಾರನನ್ನೂ ನೇಮಿಸಲಾಗಿದೆ ಎಂದು ಹೇಳಲಾಗಿದೆ.
SCROLL FOR NEXT