ರಾಜ್ಯ

ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ; ರಾಮನಗರದಲ್ಲಿ ಎರಡು 'ವಂಚನೆ' ಪ್ರಕರಣ ವರದಿ

Sumana Upadhyaya
ಬೆಂಗಳೂರು: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದ್ದು ಆರಂಭದ ದಿನವೇ ರಾಮನಗರ ಜಿಲ್ಲೆಯಲ್ಲಿ ಎರಡು ಅಕ್ರಮ ಪ್ರಕರಣಗಳು ವರದಿಯಾಗಿವೆ. ರಾಮನಗರ ಜಿಲ್ಲೆಯಲ್ಲಿ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ.
ಅದು ಬಿಟ್ಟರೆ ಉಳಿದೆಡೆಗಳಲ್ಲಿ ಪರೀಕ್ಷೆ ನಿರಾತಂಕವಾಗಿ ನಡೆದಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕ ಬಾಬು ಬಿ, ಪರೀಕ್ಷೆ ಈ ಬಾರಿ ಸುಲಭವಾಗಿತ್ತು.ಪಠ್ಯದೊಳಗೆ ಪ್ರಶ್ನೆಗಳು ಬಂದಿದ್ದವು ಎಂದರು.
ಈ ಬಾರಿ ಪ್ರಶ್ನೆಪತ್ರಿಕೆ ಸುಲಭವಾಗಿತ್ತು. 70ಕ್ಕಿಂತ ಹೆಚ್ಚು ಅಂಕ ಸಿಗುವ ನಿರೀಕ್ಷೆಯಿದೆ ಎನ್ನುತ್ತಾಳೆ ವಿದ್ಯಾರ್ಥಿ ಸುಮಂತ್ ಕೆ. ಭೌತಶಾಸ್ತ್ರ ಪರೀಕ್ಷೆ ಸುಲಭವಾಗಿತ್ತು ಎನ್ನುತ್ತಾಳೆ ವಿದ್ಯಾರ್ಥಿನಿ ಅಭಿಜ್ಞಾ ರಾವ್.
ಹಾಜರಾತಿ ಕಡಿಮೆಯಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ನಿರಾಕರಿಸಲಾಗಿತ್ತು. ವಿದ್ಯಾರ್ಥಿಗಳು ಹೋಗಿ ಶಿಕ್ಷಣ ಇಲಾಖೆ ಮುಂದೆ ಅಂಗಲಾಚುತ್ತಿದ್ದ ದೃಶ್ಯ ಕಂಡುಬಂತು. ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಪ್ರಾಂಶುಪಾಲರು ಹಣ ಪಡೆದುಕೊಂಡು ಪ್ರವೇಶ ಪತ್ರ ಕೊಡಿಸುವುದಾಗಿ ಭರವಸೆ ನೀಡಿದ್ದರು ಎಂದು ಹೇಳುತ್ತಾರೆ.
SCROLL FOR NEXT