ರಾಜ್ಯ

ಮಂಡ್ಯದಲ್ಲಿ ಮತ್ತೊಂದು ದುರಂತ: ಪ್ರವಾಸಿಗರ ಬಸ್ ಪಲ್ಟಿ, 30ಕ್ಕೂ ಹೆಚ್ಚು ಜನರಿಗೆ ಗಾಯ

Raghavendra Adiga
ಮಂಡ್ಯ: ಕಳೆದ ವರ್ಷ ನವೆಂಬರ್ ನಲ್ಲಿ ಮಂಡ್ಯ ಜಿಲ್ಲೆ ಪಾಂಡವಪುರದ ಕನಗನಮರಡಿಯಲ್ಲಿ ಬಸ್ ಕಾಲುವೆಗೆ ಉರುಳಿ ಹಲವಾರು ಜನರು ಪ್ರಾಣ ಬಿಟ್ತ ಘಟನೆ ಇನ್ನೂ ಹಸಿಯಾಗಿರುವಾಗಲೇ ಮಂಡ್ಯದಲ್ಲಿ ಇನ್ನೊಂದು ಬಸ್ ದುರಂತ ನಡೆದಿದೆ.  ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಹ್ಜನರಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. 
ಮಂಡ್ಯದ ಮದ್ದೂರು ಪಟ್ಟಣದ ಹೊರವಲಯದಲ್ಲಿನ ಐಶ್ವರ್ಯ ಶಾಲೆ ಸಮೀಪ ಈ ಘಟನೆ ನಡೆದಿದ್ದು ಪ್ರವಾಸಿ ಬಸ್ ಪಶ್ಚಿಮ ಬಂಗಾಳ ರಾಜ್ಯಕ್ಕೆ ಸೇರಿದ್ದೆಂದು ತಿಳಿದುಬಂದಿದೆ. ಪ್ರವಾಸಕ್ಕಾಗಿ ಆಗಮಿಸಿದ್ದ ಜನರಿದ್ದ ಬಸ್ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕ ಗದ್ದೆಗೆ ಉರುಳಿ ಬಿದ್ದಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. 4 ಅ್ಯಂಬುಲೆನ್ಸ್‌ಗಳಲ್ಲಿ ಗಾಯಾಳುಗಳನ್ನು ಮಂಡ್ಯದ ಜಿಲ್ಲಾಸ್ಪತ್ರೆಗೆ ಕರೆತಂದು ಸೇರಿಸಲಾಗಿದೆ.
ಬಸ್ಸು ಮೈಸೂರಿನಿಂದ ಬೆಂಗಳೂರಿನತ್ತ ಬರುತ್ತಿತ್ತು. ರಸ್ತೆ ಎಡಬಾಗಕ್ಕೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ನಿಂತಿದ್ದು ಕಂಡ ಬಸ್ ವಾಲಕ ತಕ್ಷಣ ಸ್ಟಿಯರಿಂಗ್ ಅನ್ನು ಎಡಬಾಘಕ್ಕೆ ಎಳೆದಿದ್ದಾನೆ. ಆಗ ಬಸ್ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ.
ಬಸ್ಸಿನಲ್ಲಿ ಸುಮಾರು ಐವತ್ತು ಮಂದಿ ಇದ್ದು ಇದರಲ್ಲಿ ಯಾರೀಗೆ ಶಾ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ.ಮದ್ದೂರು ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
SCROLL FOR NEXT