ರಾಜ್ಯ

ನಿರಾಶ್ರಿತರು, ಕಾಣೆಯಾದ ಮಕ್ಕಳ ವಿವರ ದಾಖಲೆಗಾಗಿ ಬಿಬಿಎಂಪಿ ವಿಶೇಷ ಮೊಬೈಲ್ ಆಪ್

Raghavendra Adiga
ಬೆಂಗಳೂರು: ಮಹಾನಗರದಲ್ಲಿನ  ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಭಾಗವಾಗಿ ಬ್ರಹ್ಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಕಲ್ಯಾಣ ಇಲಾಖೆಯು ಖಾಸಗಿ ಸಂಸ್ಥೆಯೊಡನೆ ಒಪ್ಪಂದ ಮಾಡಿಕೊಂಡು ನಗರದಲ್ಲಿ ಕಂಡುಬರುವ ನಿರಾಶ್ರಿತ ಜನರ ಮಾಹಿತಿ ಸಂಗ್ರಹಿಸಲು ಹೊಸದೊಂದು ಮೊಬೈಲ್ ಅಪ್ಲಿಕೇಷನ್ ಪ್ರಾರಂಭಿಸಿದೆ.
ಮೊಬೈಲ್ ಆಪ್ ಮೂಲಕ ಮುಖದ ಗುರುತಿಸುವಿಕೆ (facial recognition,), ಸ್ಥಳದ ಹೆಸರು ಪತ್ತೆ, ದಾಖಲಾತಿಯಂತಹಾ ಸೌಲಭ್ಯ ದೊರೆಯಲಿದೆ. ಈ ಮೂಲಕ ನಗರದಲ್ಲಿ ಮನೆ ಇಲ್ಲದ ನಿರಾಶ್ರಿತರನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಅಪ್ ಡೇಟ್ ಮಾಡಿ ಎಲ್ಲರ ಉಪಯೋಗಕ್ಖಾಗಿ ಬಿಡುಗಡೆ ಮಾಡಲಾಗುತ್ತದೆ.
"ಈ ಅಪ್ಲಿಕೇಶನ್ ನಲ್ಲಿ ನಾವು ಹಲವಾರು ವರ್ಗಗಳನ್ನು ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಬೀದಿಗಳಲ್ಲಿ, ಬದುಕುವ ಹಿರಿಯ ನಾಗರಿಕರು, ವಿಶೇಷವಾಗಿ ಸ್ಮರಣಶಕ್ತಿಯಿಲ್ಲದೆ ರಸ್ತೆಗಳಲ್ಲಿ ಅಲೆದಾಡುವ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಮನೆ ಇಲ್ಲದ ನಿರಾಶ್ರಿತರೆಂದು ಕಂಡುಬಂದ ವಯಸ್ಕ ಮಹಿಳಾ ಮತ್ತು ಪುರುಷರು, ಕಾಣೆಯಾಗಿರುವ ಮಕ್ಕಳ ವಿವರಗಳು ಇಲ್ಲಿ ಲಭ್ಯವಾಗಲಿದೆ." "ಬಿಬಿಎಂಪಿ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಖಾಸಗಿ ಸಂಸ್ಥೆಯ ಹೆಸರು ಬಹಿರಂಗಪಡಿಸದೆ ಇದ್ದರೂ ಯೋಜನೆಯು ಒಂದು ವೆಬ್ ತಾಣ ಹಾಗೂ ಮೊಬೈಲ್ ಅಪ್ಲಿಕೇಷನ್ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲು ಒಂದು ವರ್ಷ ತೆಗೆದುಕೊಳ್ಲಲಿದೆ ಎಂದಿದ್ದಾರೆ."ನಾವು ನಮ್ಮನ್ನು ಸಂಪರ್ಕಿಸಲು ಜನರಿಗೆ ಒಂದು ಸಹಾಯವಾಣಿ  ಕಲ್ಪಿಸುವ ಉದ್ದೇಶ ಹೊಂದಿದ್ದೇವೆ.ಒಬ್ಬ ಸಾಮಾನ್ಯ ನಾಗರಿಕನು ಬೀದಿಯಲ್ಲಿ  ಯಾವುದೇ ಅನಾಥ ಮಗುವನ್ನು ಕಂಡರೆ ಭಿಕ್ಷೆ ಬೇಡಿಕೊಳ್ಳುತ್ತಾ ತಿರುಗುವುದು, ಕಾಣೆಯಾಗಿರುವ ಮಗುವಾಗಲಿ ಕಂಡರೆ ಅವರು ತಕ್ಷಣ ಬಿಬಿಎಂಪಿಗೆ ಸಂಪರ್ಕಿಸಬಹುದು.
ನಮ್ಮ ಸಿಬ್ಬಂದಿ ಮಗುವನ್ನು ರಕ್ಷಿಸುತ್ತಾರೆ. ಅವನನ್ನು ಅಥವಾ ಅವಳನ್ನು ನಿರಾಶ್ರಿತರ ಆಶ್ರಯ ತಾಣಕ್ಕೆ ಕರೆದೊಯ್ಯಲಾಗುವುದು.ಮತ್ತು ವಿವರಗಳನ್ನು ವೆಬ್ ತಾಣ ಹಾಗೂ ಅಪ್ಲಿಕೇಷನ್ ಗೆ ಅಪ್ ಮಾಡಲಾಗುವುದು.ಕರ್ನಾಟಕ ರಾಜ್ಯ ಪೊಲೀಸರೊಂದಿಗೆ ನಾವು ಈ ಮಾಹಿತಿ ಹಂಚಿಕೊಳ್ಳುತ್ತೇವೆ.ಅವರು ಈ ಸಂಬಂಧ ಯಾವುದೇ ದೂರು ಸ್ವೀಕರಿಸಿದ್ದಲ್ಲಿ ಅಂತಹಾ ಮಕ್ಕಳನ್ನು ಪತ್ತೆ ಮಾಡಲಿದ್ದಾರೆ." ಅಧಿಕಾರಿಗಳು ವಿವರಿಸಿದ್ದಾರೆ.ಸಂಸ್ಥೆಯ ವೆಚ್ಚದಲ್ಲಿ ಅಪ್ಲಿಕೇಶನ್ ಅಭಿವೃದ್ಧಿಯಾಗುತ್ತಿದೆ ಮತ್ತು ಬಿಬಿಎಂಪಿ ಯಾವುದೇ ಹಣವನ್ನು ಈ ಬಗ್ಗೆ ಖರ್ಚು ಮಾಡುತ್ತಿಲ್ಲ.
ಇಲಾಖೆಯಿಂದ ಗುರುತಿಸಲ್ಪಡುವ ಆಶ್ರಯ ಮನೆಗಳಿಗೆ ಡಿಮೆನ್ಶಿಯಾ ಪೀಡಿತರು,  ಮನೆಯಿಲ್ಲದ ವಯಸ್ಕ ಮಹಿಳೆಯರು ಮತ್ತು ಪುರುಷರನ್ನು ಸೇರಿಸಲಾಗುವುದು. ಅನಾರೋಗ್ಯ ಹೊಂದಿರುವ ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸಲಾಗುವುದು.ಇಲ್ಲಿಯವರೆಗೆ, ಇಂಪ್ಯಾಕ್ಟ್ ಇಂಡಿಯಾ ಕನ್ಸೋರ್ಟಿಯಂ ಅಡಿಯಲ್ಲಿ  30 ಎನ್ ಜಿಒಗಳೊಂದಿಗೆ ನಾವು ಈ ಸಹಯೋಗ ಹೊಂದಿದ್ದೇವೆ.ನಗರದಲ್ಲಿ 5,109 ನಿರಾಶ್ರಿತರನ್ನು ಇದುವರೆಗಿನ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ.
SCROLL FOR NEXT