ರಾಜ್ಯ

ಆರ್ ಟಿಇ ಕೋಟಾ ತಿದ್ದುಪಡಿ; ಪೋಷಕರಲ್ಲಿ ಆತಂಕ

Sumana Upadhyaya
ಬೆಂಗಳೂರು; ರಾಜ್ಯದಲ್ಲಿ ಇತ್ತೀಚೆಗೆ ಶಿಕ್ಷಣ ಹಕ್ಕು ಕಾಯ್ದೆಗೆ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಶೇಕಡಾ 25ರಷ್ಟು ಆರ್ ಟಿಇ ಕೋಟಾದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮೀಸಲಾಗಿದ್ದ ಪ್ರವೇಶಾತಿ ಇದೀಗ ಖಾಸಗಿ ಅನುದಾನರಹಿತ ಶಾಲೆಗಳನ್ನು ಕೂಡ ಪರಿಗಣಿಸಬೇಕಾದ ಸ್ಥಿತಿ ಬಂದಿದೆ.
ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರವೇಶಾತಿಗೆ ಎಲ್ ಕೆಜಿಯನ್ನು ಪ್ರವೇಶಾತಿಯ ತರಗತಿ ಎಂದು ನಿಗದಿಪಡಿಸಲಾಗಿದ್ದು ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಪೂರ್ವ ಪ್ರಾಥಮಿಕ ತರಗತಿಗಳಿಗೆ ಪ್ರವೇಶಾತಿಯಿಲ್ಲ. ಇದೀಗ ಶಿಕ್ಷಣ ಇಲಾಖೆಗೆ ಬೇರೆ ದಾರಿಯಿಲ್ಲದೆ ಖಾಸಗಿ ಅನುದಾನರಹಿತ ಶಾಲೆಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪರಿಗಣಿಸಬೇಕಾಗಿದೆ.
ಶಾಲೆಗಳು ಹೊರಡಿಸಿರುವ ಇಲಾಖೆಯ ಸಾಧ್ಯತಾ ಪಟ್ಟಿಯಲ್ಲಿ ರಾಜ್ಯಾದ್ಯಂತ ಇರುವ ಖಾಸಗಿ ಅನುದಾನರಹಿತ ಶಾಲೆಗಳನ್ನು ಕೂಡ ಹೆಸರಿಸಲಾಗಿದೆ. ಅದರಲ್ಲಿ ಎಲ್ ಕೆಜಿ ಗೆ ಪ್ರವೇಶ ಪ್ರಕ್ರಿಯೆಯನ್ನು ಸೂಚಿಸಲಾಗಿದೆ. ಸಂಘದ ಕಾರ್ಯದರ್ಶಿ ಬಿ ಎ ಯೋಗಾನಂದ, 2018-19ರ ಶೈಕ್ಷಣಿಕ ವರ್ಷದಲ್ಲಿ ಆರ್ ಟಿಇಯಡಿ ಲಭ್ಯವಿದ್ದ ಒಟ್ಟು 1.25 ಲಕ್ಷ ಸೀಟುಗಳಲ್ಲಿ 80 ಸಾವಿರಕ್ಕೂ ಅಧಿಕ ಸೀಟಿಗಳು ಪೂರ್ವ ಪ್ರಾಥಮಿಕ ಸೀಟುಗಳಾಗಿದ್ದವು. ಈ ಬಾರಿ ಪೋಷಕರು ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾರೆ.
ಆಕ್ಷೇಪಗಳು ಬಂದ ನಂತರ ಸುತ್ತಮುತ್ತಲ ಶಾಲೆಗಳ ಪಟ್ಟಿಯನ್ನು ನಾವು ಬಿಡುಗಡೆ ಮಾಡುತ್ತೇವೆ, ಅದರಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹೆಸರುಗಳನ್ನು ತೆಗೆದುಹಾಕಲಾಗುವುದು ಎಂದರು.
ಸುತ್ತಮುತ್ತ ಖಾಸಗಿ ಅನುದಾನಿತ ಅಥವಾ ಸರ್ಕಾರಿ ಶಾಲೆಗಳಿಲ್ಲದಿದ್ದರೆ ಖಾಸಗಿ ಅನುದಾನರಹಿತ ಶಾಲೆಗಳಿಗೆ ಪ್ರವೇಶ ಪ್ರಕ್ರಿಯೆಯ ಸೀಟುಗಳನ್ನು ನೀಡಬೇಕಾಗುತ್ತದೆ. ಇದರ ಹಿಂದೆ ಖಾಸಗಿ ಶಾಲಾ ಮಂಡಳಿಯ ಲಾಬಿ ಇದೆ ಎಂದು ಹೇಳಲಾಗುತ್ತಿದೆ.
ಆರ್ ಟಿಇ ಕಾರ್ಯಪಡೆಯ ರಾಜ್ಯ ಸಂಚಾಲಕ ನಾಗಸಿಂಹ ಜಿ ರಾವ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಇಲ್ಲವೆಂದು ಗೊತ್ತಿದ್ದರೂ ಸಹ ಸರ್ಕಾರ ನಿಯಮಕ್ಕೆ ತಿದ್ದುಪಡಿ ತಂದಿದೆ. ಇದರ ಹಿಂದೆ ಖಾಸಗಿ ಶಾಲೆಗಳ ಲಾಬಿ ಇರುವುದು ಸ್ಪಷ್ಟವಾಗುತ್ತದೆ. ನಿಯಮಕ್ಕೆ ತಿದ್ದುಪಡಿ ತಂದರೆ ಆರ್ ಟಿಇ ಕಾಯ್ದೆಯ ಸೆಕ್ಷನ್ 4ನ್ನು ಉಲ್ಲಂಘಿಸಿದಂತಾಗುವುದಿಲ್ಲವೇ ಎಂದು ಕೇಳುತ್ತಾರೆ.
SCROLL FOR NEXT