ಬೆಂಗಳೂರು: ಬೆಂಗಳೂರು ಜ್ಞಾನಭಾರತಿ ಆವರಣದಲ್ಲಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ (ಎನ್ಎಲ್ಎಸ್ಯುಐ) ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಶನಿವಾರ ತನ್ನ ಹಾಸ್ಟೆಲ್ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಉತ್ತರ ಪ್ರದೇಶ ಮೂಲದ ಕನಿಶ್ ಬಾರ್ಬಿ (20) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 2ರ ವೇಳೆಗೆ ಆತನ ಸಹಪಾಠಿ ನೇಣು ಬಿಗಿದುಕೊಂಡಿರುವ ಕನಿಶ್ ನನ್ನು ಕಂಡಾಗಲೇ ಘಟನೆ ಬೆಳಜಿಗೆ ಬಂದಿದೆ ಎಂದು ಪೋಲೀಸರು ಹೇಳೀದ್ದಾರೆ.
ಆತ್ಮಹತ್ಯೆಗೆ ಮುನ್ನ ಬಾರ್ಬಿ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ.ಹಾಗಾಗಿ ಈತ ಏಕಾಗಿ ಈ ನಿರ್ಧಾರ ತೆಗೆದುಕೊಂಡನೆಂದು ನಾವು ಇನ್ನೂ ತಿಳಿದುಕೊಳ್ಳಬೇಕಾಗಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
"ವಿದ್ಯಾರ್ಥಿಯ ಸಾವು ನಮ್ಮ ಪಾಲಿಗೆ ತಂದೆಯೊಬ್ಬರಿಗೆ ಮಗನು ಸತ್ತಂತೆ ಭಾಸವಾಗಿದೆ, ನಾವು ಆಘಾತಗೊಂಡಿದ್ದೇವೆ. ಈ ಸಾವಿನ ನಷ್ಟ ಭಾರಿಸಲಾರದಾಗಿದೆ" ಎನ್ಎಲ್ಎಸ್ಯುಐ ಉಪಕುಲಪತಿ ಪ್ರೊಫೆಸರ್ ವೆಂಕಟರಾವ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics