ವಿವೇಕ ಹಂಸ ಪತ್ರಿಕೆಗೆ ರಜತ ಮಹೋತ್ಸವ: ಮಾ.17 ರಂದು ದಿನಪೂರ್ತಿ 'ರತಜಹಂಸ' ಕಾರ್ಯಕ್ರಮ
ಬೆಂಗಳೂರು: ಸಮಾಜದ ಹಿತಾಸಕ್ತಿಯ ಉದ್ದೇಶದಿಂದ ಪ್ರಾರಂಭವಾದ ವಿವೇಕ ಹಂಸ ಪತ್ರಿಕೆಯ ರಜತ ಮಹೋತ್ಸವದ ಅಂಗವಾಗಿ ಮಾ.17 ರಂದು ಬೆಳಿಗ್ಗೆ 7 ರಿಂದ ಸಂಜೆ 7 ವರೆಗೆ ರಜತಹಂಸ ಸಮಾರಂಭ ನಡೆಯಲಿದೆ.
ಜಯನಗರದ ಎನ್ಎಂಕೆಆರ್ ವಿ ಆವರಣದ ಮಂಗಳ ಮಂಟಪದಲ್ಲಿ ಉದ್ಘಾಟನೆಯಾಗಲಿರುವ ಸಮಾರಂಭದಲ್ಲಿ ಸಂವಾದ, ಉಪನ್ಯಾಸ, ತಾಳವಾದ್ಯ ಕಾರ್ಯಕ್ರಮಗಳು ನಡೆಯಲಿವೆ.
ಈ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸಾಧುಗಳಿಗೆ ಗುರುವ೦ದನೆ, ಸ್ವಾಮಿ ನಿರ್ಭಯಾನ೦ದ ಸರಸ್ವತಿ, ವಿದ್ವಾನ್ ಗಣೇಶ ಭಟ್ಟ ಹೋಬಳಿ, ಚಕ್ರವರ್ತಿ ಸೂಲಿಬೆಲೆ ಅವರಿ೦ದ ಉಪನ್ಯಾಸ, ವಿದ್ವಾನ್ ಆನೂರು ಅನ೦ತಕೃಷ್ಣ ಶರ್ಮ ಸುರಮಣಿ ಪ್ರವೀಣ್ ಗೋಡ್ಕಿ೦ಡಿ ನಾದಜ್ಯೋತಿ ವಿದ್ವಾನ್ ಪ್ರಾಣೇಶ್ ಜೊತೆಗೆ 25 ಖ್ಯಾತ ಕಲಾವಿದರಿ೦ದ ಸ೦ಗೀತ ಸ೦ಜೆಯನ್ನು ಹಮ್ಮಿಕೊಳ್ಳಲಾಗಿದೆ.
ಸಮಾಜದ ಹಿತಾಸಕ್ತಿಯ ಉದ್ದೇಶದಿ೦ದ ಪ್ರಾರ೦ಭವಾದ ವಿವೇಕಹ೦ಸ ಪತ್ರಿಕೆಯನ್ನು 1994ರಲ್ಲಿ ಪ್ರಾರಂಭಿಸಲಾಗಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos