ರಾಜ್ಯ

ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 14ಕ್ಕೆ ಏರಿಕೆ, ಅವಶೇಷಗಳ ಅಡಿ ಮೂವರು ಜೀವಂತ

Srinivasamurthy VN
ಧಾರವಾಡ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬಿದ್ದ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಕಟ್ಟಡಗಳ ಅಡಿಯಲ್ಲಿ ಇನ್ನೂ ಮೂವರು ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ.
ಧಾರಾವಾಡದ ಕುಮಾರೇಶ್ವರ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಸಂಪೂರ್ಣ ನೆಲಸಮವಾಗಿದ್ದು, ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿದ್ದಾರೆ. ನಿರ್ಮಾಣ ಹಂತದ ಕಟ್ಟಡ ಕುಸಿದು ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿರುವ ಮೂವರು ಜೀವಂತವಾಗಿರುವ ಮಾಹಿತಿ ರಕ್ಷಣಾ ತಂಡಗಳಿಗೆ ಸಿಕ್ಕಿದೆ. ದಿಲೀಪ್, ಸೋಮು ಮತ್ತು ಸಂಗೀತ ಎನ್ನುವರರು ಜೀವಂತವಾಗಿ ಅವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಮೂವರು ಪಾರ್ಕಿಂಗ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಬದುಕುಳಿದ ಮೂವರ ಪೈಕಿ ದಿಲೀಪ್ ಎಂಬುವವರು ಮಾಹಿತಿ ನೀಡಿದ್ದಾರೆ. 
ಈ ಹಿನ್ನಲೆಯಲ್ಲಿ ರಕ್ಷಣಾ ಸಿಬ್ಬಂದಿ ಅವರಿಗೆ ಆಕ್ಸಿಜನ್ ಪೂರೈಕೆ ಮಾಡಿದೆ. ಅವರು ಇರುವ ಸ್ಥಳವನ್ನು ಪ್ರವೇಶಿಸಲು ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಸಿಬ್ಬಂದಿ ಪ್ರಯತ್ನವನ್ನು ಮುಂದುವರಿಸಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳೂ ರಾತ್ರಿಯಿಂದ ಸ್ಥಳದಲ್ಲೇ ಇದ್ದು, ಕಟ್ಟಡದ ಅವಶೇಷಗಳ ಅಡಿಯಲ್ಲಿ ಒಟ್ಟು 61  ಜನರನ್ನು ರಕ್ಷಣೆ ಮಾಡಲಾಗಿದೆ.
ಕುಮಾರೇಶ್ವರ ನಗರ ನಿವಾಸಿಯಾಗಿದ್ದ  ಅನೂಪ್ ಕುಡತರಕರ್​ ಎಂಬ 23 ವರ್ಷದ ಯುವಕ ಹಾಗೂ 45 ವರ್ಷದ ದ್ರಾಕ್ಷಾಯಿಣಿ ಮತ್ತುತ್ತೂರು ಎಂಬ ಮಹಿಳೆ ಮೃತಪಟ್ಟಿದ್ದಾರೆ. ಅನೂಪ ಕುಡತರಕರ್  ಕುಸಿತ ಕಟ್ಟಡ ಬಳಿ ಸೈಬರ್​​ ಕೆಫೆ ನಡೆಸುತ್ತಿದ್ದ. ದಾಕ್ಷಾಯಿಣಿ ಮುತ್ತೂರು ಕಟ್ಟಡದ ಕೆಳ ಮಹಡಿಯಲ್ಲಿ 5 ತಿಂಗಳಿಂದ ಹೊಟೆಲ್ ನಡೆಸುತ್ತಿದ್ದರು. ಗಂಡ ಹೊರಗೆ ಹೋದಾಗ ಕಟ್ಟಡ ಕುಸಿದು ಬಿದ್ದಿತ್ತು. 
SCROLL FOR NEXT