ರಾಜ್ಯ

ಅಕ್ರಮ ನಿವೇಶನ ಮಂಜೂರು ಆರೋಪ: ಸಿಟಿ ರವಿ ಕುಟುಂಬದ ವಿರುದ್ಧ ಪ್ರಕರಣ ರದ್ದು

Raghavendra Adiga
ಬೆಂಗಳೂರು: ಚಿಕ್ಕಮಗಳೂರು ಬಿಜೆಪಿ ಶಾಸಕ ಸಿಟಿ ರವಿ ಅವರ ಕುಟುಂಬದ ವಿರುದ್ಧದ ಅಕ್ರಮ ನಿವೇಶನ ಪಡೆದ ಆರೋಪಕ್ಕೆ ಸಂಬಂಧಿಸಿ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ. 
ತಮ್ಮ ಪ್ರಭಾವವನ್ನು ಬಳಸಿಕೊಂಡು ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿಂದ ಮೂರು ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದಾರೆಂದು ಶಾಸಕ ಸಿಟಿ ರವಿ, ಪತ್ನಿ ಪಲ್ಲವಿ ರವಿ, ತಂಗಿ ತೇಜಸ್ವಿನಿ ಹಾಗೂ ಅವರ ಪತಿ ಸುದರ್ಶನ್ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿದ್ದ  ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದು ಮಾಡಿದೆ.
ಈ ಸಂಬಂಧ ಶಾಸಕ ರವಿ ಸೇರ್ ನಾಲ್ವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದ್ದು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಶಾಸಕ ತನ್ನ ಪ್ರಭಾವ ಬಳಸಿ ನಿವೇಶನ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು  ಆರ್. ದೇವಿಪ್ರಸಾದ್ ಕೆಳ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಇದರನ್ವಯ ಲೋಕಾಯುಕ್ತ ನ್ಯಾಯಾಲಯ ನಾಲ್ವರಿಗೆ ಸಮನ್ಸ್ ಜಾರಿ ,,ಮಾಡಿತ್ತು.
SCROLL FOR NEXT