ರಾಜ್ಯ

ನಿಯಮ ಉಲ್ಲಂಘನೆ: ರಾಜ್ಯದಲ್ಲಿ ಓಲಾ ಸೇವೆಗಳಿಗೆ ನಿಷೇಧ!

Raghavendra Adiga
ಬೆಂಗಳೂರು: ಸಾರಿಗೆ ನಿಯಮ ಉಲ್ಲಂಘನೆ ಮಾಡಿರುವ ಕಾರಣ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚರಿಸುವ ಆಪ್ ಆಧಾರಿತ ಸಾರಿಗೆ ಓಲಾ ಕ್ಯಾಬ್ ಸೇವೆಗೆ ಸಾರಿಗೆ ಇಲಾಖೆ ಆರು ತಿಂಗಳ ಕಾಲ ನಿಷೇಧ ಹೇರಿದೆ.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ವೆಬ್ ತಂತ್ರಜ್ಞಾನ ಅಗ್ರಿಗೇಟರ್ ಅಧಿನಿಯಮ- 2016ರ  ನಿಯಮ ಉಲ್ಲಂಂಘನೆ ಮಾಡಿರುವ ಹಿನ್ನೆಲೆಯಲ್ಲಿ  ಓಲಾ ಸಂಸ್ಥೆ ಪರವಾನಗಿಯನ್ನು ಸಾರಿಗೆ ಇಲಾಖೆ ರದ್ದುಪಡಿಸಿದೆ.
ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಮಾರ್ಚ್ 18ರ<ದು ಆದೇಶ ಹೊರಡಿಸಿದ್ದಾರೆ. ಅಲ್ಲದೆ ಈ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ಓಲಾ ಪರವಾನಗಿಯನ್ನು ಸಾರಿಗೆ ಇಲಾಖೆಗೆ ಹಸ್ತಾಂತರಿಸಬೇಕು ಎಂದೂ ಹೇಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಓಲಾ ಟ್ಯಾಕ್ಸಿ ಓಡಿಸ;ಲು ಅನಿ ಟೆಕ್ನಾಲಜಿಸ್ ಸಂಸ್ಥೆ ಹೆಸರಿನಲ್ಲಿ ಓಲಾಗೆ ೨೦೨೧ರವರೆಗೆ ಪರವಾನಗಿ ನೀಡಲಾಗಿತ್ತು. ಆದರೆ ಓಲಾ ಕೇವಲ ಟ್ಯಾಕ್ಸಿಗಳನ್ನು ಮಾತ್ರವಲ್ಲದೆ ಬೈಕ್ ಟ್ಯಾಕ್ಸಿಗಳನ್ನೂ ಪ್ರಾರಂಭಿಸಿ ನಿಯಮವನ್ನು ಉಲ್ಲಂಘಿಸಿದೆ.ಹೀಗಾಗಿ ಮುಂದಿನ ಆರು ತಿಂಗಳ ಕಾಲ ಪರವಾನಗಿ ರದ್ದು ಮಾಡಿರುವುದಾಗಿ ಆದೇಶದಲ್ಲಿ ಹೇಳಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ್ದ ಹಿನ್ನೆಲೆಯಲ್ಲಿ ಓಲಾ ಸಂಸ್ಥೆಯ  5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ ಇದಾಗಲೇ ವಶಕ್ಕೆ ಪಡೆದಿತ್ತು. 
SCROLL FOR NEXT