ರಾಜ್ಯ

ರಾಜ್ಯದಲ್ಲಿ ಓಲಾ ಸೇವೆಗಳ ನಿಷೇಧ ವಾಪಾಸ್, ಕ್ಯಾಬ್ ಸವಾರರು ನಿರಾಳ

Raghavendra Adiga
ಬೆಂಗಳೂರು: ಮೋಬೈಲ್ ಆಪ್ ಆಧಾರಿತ ಕ್ಯಾಬ್ ಸೇವೆ ಓಲಾ ಮೇಲಿನ ಆರು ತಿಂಗಳ ನಿಷೇಧವನ್ನು ರಾಜ್ಯ ಸಾರಿಗೆ ಇಲಾಖೆ ಹಿಂಪಡೆದ್ಯುಕೊಂಡಿದೆ. 
"ಇಂದಿನಿಂಡ ಓಲಾ ಕ್ಯಾಬ್ ಗಳು ಎಂದಿನಂತೆ ಸಂಚರಿಸಲಿದೆ. ಆದರೆ ನೀತಿ ನಿಯಮಗಳನ್ನು ಹೊಸ ತಂತ್ರಜ್ಞಾನದೊಡನೆ ತುರ್ತಾಗಿ ಬದಲಿಸಿಕೊಳ್ಳಬೇಕು.ಅಲ್ಲದೆ ಸರ್ಕಾರದ ಹೊಸ ನೀತಿಗಳ ಜಾರಿಗೆ ಕೈಗಾರಿಕಾ ಸಂಸ್ಥೆಗಳು ಸಹ ಸಹಕರಿಸಬೇಕು" ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ವೆಬ್ ತಂತ್ರಜ್ಞಾನ ಅಗ್ರಿಗೇಟರ್ ಅಧಿನಿಯಮ- 2016ರ  ನಿಯಮ ಉಲ್ಲಂಂಘನೆ ಮಾಡಿರುವ ಹಿನ್ನೆಲೆಯಲ್ಲಿ  ಓಲಾ ಸಂಸ್ಥೆ ಪರವಾನಗಿಯನ್ನು ಸಾರಿಗೆ ಇಲಾಖೆ  ಆರು ತಿಂಗಳ ಕಾಲ ರದ್ದುಪಡಿಸಿತ್ತು. ಪರವಾನಗಿಯನ್ನು ರದ್ದುಗೊಳಿಸಿ ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ಆದೇಶಿಸಿದ್ದರು. ಆದರೆ ಸಾರಿಗೆ ಇಲಾಖೆ ಆದೇಶವನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ.
SCROLL FOR NEXT