ಜೆ.ಎನ್. ಗಣೇಶ್ 
ರಾಜ್ಯ

ಆನಂದ್ ಸಿಂಗ್ ಹಲ್ಲೆ ಪ್ರಕರಣ: ಗಣೇಶ್​ ಜಾಮೀನು ಅರ್ಜಿ ವಜಾ

ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಜಾಮೀನು ಅರ್ಜಿ ವಜಾಗೊಂಡಿದೆ.

ಬೆಂಗಳೂರು: ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ನಲ್ಲಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಮೇಲೆ ನಡೆಸಿದ ಹಲ್ಲೆ  ಪ್ರಕರಣಕ್ಕೆ ಸಂಬಂಧಿಸಿ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಜಾಮೀನು ಅರ್ಜಿ ವಜಾಗೊಂಡಿದೆ. 
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ಗಣೇಶ್ ಅವರ ಜಾಮೀನು ಅರ್ಜಿ ವಜಾಗೊಳಿಸಿದ್ದು ಗಣೇಶ್ ಅವರಿಗೆ ಜೈಲುವಾಸ ಖಾಯಂ ಆಗಿದೆ.
ಸೋಮವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ  ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ.ರಾಮಚಂದ್ರ ಉದಾರ್ ಜಾಮೀನು ಅರ್ಜಿ ವಜಾ ಮಾಡಿ ಆದೇಶಿಸಿದ್ದಾರೆ. ಗಣೇಶ್ ಪರ ವಕೀಲ  ಸಿ.ಎಚ್​.  ಹನುಮಂತರಾಯಪ್ಪ ವಾದ  ಮಂಡಿಸಿದ್ದರೆ ಬಿಡದಿ ಪೊಲೀಸರ ಪರ ಸರ್ಕಾರಿ ಅಭಿಯೋಜಕಿ ರಾಜೇಶ್ವರಿ ಪ್ರತಿವಾದ ಮಂಡಿಸಿದ್ದಾರೆ.
ಗಣೇಶ್ ನಡೆಸಿದ್ದ ಹಲ್ಲೆಯಿಂದಾಗಿ ಆನಂದ್ ಸಿಂಗ್ ಅವರ ಕಣ್ಣು, ತಲೆಗೆ ಗಂಭೀರ ಗಾಯವಾಗಿತ್ತು.ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿತ್ತು. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಿಡದಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಶಾಸಕ ಗಣೇಶ್ ನಾಪತ್ತೆಯಾಗಿದ್ದರು. ಸರಿಯಾಗಿ ಒಂದು ತಿಂಗಳ ನಂತರ ಗುಜರಾತಿನಲ್ಲಿ ಶಾಸಕರ ಬಂಧನವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಲ್ಫ್ ಆಫ್ ಮೆಕ್ಸಿಕೋ, ಒಂಟಾರಿಯೊ ಲೇಕ್ ಬಳಿಕ Strait of Hormuz ಗೆ ನನ್ನ ಹೆಸರು ಮರುನಾಮಕರಣ ಮಾಡಿ- ಅಮೆರಿಕ ಅಧ್ಯಕ್ಷ Trump ವಿಚಿತ್ರ ಬೇಡಿಕೆ!

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್ -243 ಪರೀಕ್ಷೆ ಯಶಸ್ವಿ

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta