ರಾಜ್ಯ

ಬೆಂಗಳೂರು: ಮನೆ, ಸರಗಳ್ಳತನದಲ್ಲಿ ಭಾಗಿಯಾಗಿದ್ದ ಅಂತರಾಜ್ಯ ದರೋಡೆಕೋರರ ಗ್ಯಾಂಗ್ ಸೆರೆ

Raghavendra Adiga
ಬೆಂಗಳೂರು: ನಗರದ ವಿವಿಧ ಠಾಣೆಗಳ 20 ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸಿ, 600 ಗ್ರಾಂ ತೂಕದ ಚಿನ್ನದ ಒಡವೆ ಹಾಗೂ ಒಂದು ಡ್ಯೂಕ್ ಬೈಕ್ ಅನ್ನು ವಶಪಡಿಸಿಕೊಳ್ಳುವಲ್ಲಿ ವಿದ್ಯಾರಣ್ಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ.  ಮುಂಬೈ ಠಾಣಾ ಮೂಲದ ಮಹಮ್ಮದ್ ಅಲಿ (23), ಸಯ್ಯದ್ ಕರಾರ್ ಹಸೇನ್ (37) ಬಂಧಿತ ಆರೋಪಿಗಳು.
ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾದ 18 ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 27ರಂದು ಮೈಸೂರು ಮೂಲದ ಕುಖ್ಯಾತ ಅಂತರಾಜ್ಯ ಆರೋಪಿಗಳಾದ ಮಹಮ್ಮದ್ ರಹೀಂಖಾನ್ (33), ನಯ್ಯೀಂಖಾನ್ (28) ಅವರನ್ನು ಪೊಲೀಸರು ಬಂಧಿಸಿ, 30.50 ಲಕ್ಷ ರೂ ಬೆಲೆಬಾಳುವ 1000 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ, ಮಾರ್ಚ್ 30 ರಂದು ದಾಖಲಾದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಅಂತರಾಜ್ಯ ಕಳ್ಳ ಅರುಣ್.ಜೆ (26) ಎಂಬಾತನನ್ನು ಬಂಧಿಸಿರುವ ಚಿಕ್ಕಜಾಲ ಪೊಲೀಸರು, 3.20ಲಕ್ಷ ರೂ ಬೆಲೆ ಬಾಳುವ 97 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 450 ಗ್ರಾಂ ಬೆಳ್ಳಿ ಒಡವೆಗಳನ್ನು  ವಶಪಡಿಸಿಕೊಂಡಿದ್ದಾರೆ.
ನಗರದ ರಾಮಮೂರ್ತಿ ನಗರ ಹಾಗೂ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 4ರಂದು ದಾಖಲಾದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲಮಂಗಲದ ಅಂತರಾಜ್ಯ ಕಳ್ಳ ಮಧು.ಕೆ.ಆರ್ (25) ಎಂಬಾತನನ್ನು ಪೊಲೀಸರು ಬಂಧಿಸಿ, 7.55 ಲಕ್ಷ ರೂ ಬೆಲೆ ಬಾಳುವ 262 ಗ್ರಾಂ ತೂಕದ ಚಿನ್ನಾಭರಣ ಹಾಗೂ 250 ಗ್ರಾಂ ಬೆಳ್ಳಿಯ ಒಡವೆ ವಶಪಡಿಸಿಕೊಂಡಿದ್ದಾರೆ.
SCROLL FOR NEXT