ರೈಲು ವಿಳಂಬ ಹಿನ್ನೆಲೆ: ನೀಟ್ ಪರೀಕ್ಷೆಗೆ ಹೋಗಲಾಗದೆ ಪರದಾಡಿದ ಉ.ಕರ್ನಾಟಕ ವಿದ್ಯಾರ್ಥಿಗಳು 
ರಾಜ್ಯ

ರೈಲು ವಿಳಂಬ ಹಿನ್ನೆಲೆ: 'ನೀಟ್ 'ಪರೀಕ್ಷೆಗೆ ಹೋಗಲಾಗದೆ ಪರದಾಡಿದ ಉ.ಕರ್ನಾಟಕ ವಿದ್ಯಾರ್ಥಿಗಳು

ರೈಲುಗಾಡಿ ತಡವಾದ ಕಾರಣ ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು "ನೀಟ್" ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಹೋದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ರೈಲುಗಾಡಿ ತಡವಾದ ಕಾರಣ ಉತ್ತರ ಕರ್ನಾಟಕದ ನೂರಾರು ವಿದ್ಯಾರ್ಥಿಗಳು "ನೀಟ್" ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಹೋದ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ.
ಹಂಪಿ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 16591) ಏಳು ಗಂಟೆಗಾಗಲೇ ಬೆಂಗಳೂರು ತಲುಪಬೇಕಾಗಿದ್ದ ಗಾಡಿ ಸುಮಾರು ಎರಡೂವರೆ ಗಂಟೆ ತಡವಾಗಿ ಆಗಮಿಸಿದೆ. ಇದರಿಂದಾಗಿ ಕೊಪ್ಪಳ, ಬಳ್ಳಾರಿಯ ಅನೇಕ ವಿದ್ಯಾರ್ಥಿಗಳು ತಮ್ಮ "ನೀಟ್" ಪರೀಕ್ಷಾ ಕೇಂದ್ರಗ:ಳಿಗೆ ಸಮಯಕ್ಕೆ ಸರಿಯಾಗಿ ತಲುಪಲಾಗದೆ ಪರೀಕ್ಷೆಯಿಂದ ವಂಚಿತರಾಗಿದ್ದಾರೆ.
ರೈಲು ವಿಳಂಬದಿಂಡಾಗಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಹಾಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ. 
ರೈಲು ಅಧಿಕಾರಿಗಳು ಹೇಳಿದಂತೆ ಗುಂತಕಲ್ ಹಾಗೂ ಕಲ್ಲೂರು ನಡುವೆ ಕಾಮಗಾರಿ ಕೆಲಸಗಳು ನಡೆಯುತ್ತಿರುವ ಕಾರಣ ಹಂಪಿ ಎಕ್ಸ್ ಪ್ರೆಸ್ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸಿದೆ.
ಇನ್ನು ಪರ್ಯಾಯ ಮಾರ್ಗ 120 ಕಿಮೀ ಹೆಚ್ಚುವರಿ ದೂರವನ್ನು ಹೊಂದಿದ್ದು ರೈಲು ವಿಳಂಬಕ್ಕೆ ಕಾರಣವೆನ್ನಲಾಗಿದೆ. ರೈಲ್ವೆ ಅಧಿಕಾರಿಗಳು "ನೀಟ್" ಪರೀಕ್ಷಾರ್ಥಿಗಳಿಗೆ ಈ ರೈಲು ವಿಳಂಬದ ಕುರಿತು ಪೂರ್ವ ಸೂಚನೆ ನೀಡುವ ಮೊಬೈಲ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ, ಆದರೆ ವಿದ್ಯಾರ್ಥಿಗಳು ಮಾತ್ರ ತಾವು ಅಂತಹಾ ಯಾವ ಸಂದೇಶ ಸ್ವೀಕ್ರೈಸಿಲ್ಲ ಎಂದಿದ್ದಾರೆ.
ಮೇ  5, ಭಾನುವಾರ 15 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್ ಪರೀಕ್ಷೆ) ಬರೆದಿದ್ದಾರೆ. ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ್ದ ಈ ಪರೀಕ್ಷೆ ಭಾರತದಾದ್ಯಂತ  ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇರುವ ಏಕೈಕ ಪರೀಕ್ಷೆಯಾಗಿದೆ. ಭಾರತದಾದ್ಯಂತ  ಇಂದು ಒಟ್ಟು  154 ನಗರಗಳಲ್ಲಿ ಆಯ್ದ ಕೇಂದ್ರಗಳಲ್ಲಿ 2ರಿಂದ  5 ಗಂಟೆವರೆಗೆ ನಡೆಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬೆಂಜಮಿನ್ ನೆತನ್ಯಾಹು ಮಾಡಿದ ಫೋನ್ ಕರೆಯೇ ಅಮೆರಿಕ-ಇರಾನ್ ಶಾಂತಿ ಮಾತುಕತೆ ಹಳಿತಪ್ಪುವಂತೆ ಮಾಡಿತು'

ಮಹಿಳಾ ಕೋಟಾ ಕಾನೂನು ಸಮಾನತೆಯ ಭಾರತಕ್ಕೆ ಪ್ರಮುಖ: ಪ್ರಧಾನಿ ಮೋದಿ

ಕ್ಷೇತ್ರಗಳ ಮರುವಿಂಗಡಣೆ ಪ್ರಸ್ತಾಪ ಅತ್ಯಂತ ಅಪಾಯಕಾರಿ ಹಾಗೂ ಸಂವಿಧಾನದ ಮೇಲಿನ ದಾಳಿ: ಸೋನಿಯಾ ಗಾಂಧಿ

ರಾಜ್ಯದಲ್ಲಿ ರಣ ಬಿಸಿಲು: 35 ಡಿಗ್ರಿ ತಲುಪಿದ ತಾಪಮಾನ, ಮಳೆ ಮುನ್ಸೂಚನೆ ಇಲ್ಲ ಎಂದ IMD

ಆಗ VOLVO, ಈಗ BMW; ಹಾರುಬೂದಿ ಸಾಗಿಸುತ್ತಿದ್ದ ಲಾರಿ ಉರುಳಿ ಐಶಾರಾಮಿ ಕಾರು ಅಪ್ಪಚ್ಚಿ, Video

SCROLL FOR NEXT