ರಾಜ್ಯ

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸುರಕ್ಷತಾ ತಪಾಸಣೆಗೆ ವಿರೋಧಿಸಿ ವ್ಯಕ್ತಿ ಪರಾರಿ, ಪೊಲೀಸರ ಹುಡುಕಾಟ!

Raghavendra Adiga
ಬೆಂಗಳೂರು: ಬೆಂಗಳೂರು ನಾಡಪ್ರಭು ಕೆಂಪೇಗೌಡ ನಮ್ಮ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಯೊಬ್ಬ ಸುರಕ್ಷತಾ ತಪಾಸಣೆಯನ್ನು ವಿರೋಧಿಸಿ ಅಲ್ಲಿಂದ ಹಿಂತಿರುಗಿರುವ  ಘಟನೆ ಸೋಮವಾರ ರಾತ್ರಿ ನಡೆದಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಪೂರ್ವ ದ್ವಾರದ ಮೂಲಕ ಪ್ರವೇಶಕ್ಕೆ ವ್ಯಕ್ತಿ ಪ್ರಯತ್ನಿಸಿದಾಗ ಅಲ್ಲಿನ ಸಿಬ್ಬಂದಿ ಸುರಕ್ಷಾ ತಪಾಸಣೆಗೆ ಮುಂದಾಗಿದ್ದಾರೆ.ಆದರೆ ಅಪರಿಚಿತ ವ್ಯಕ್ತಿ ತಾನು ಮೆಟಲ್ ಡಿಟಕ್ಟರ್ ಮೂಲಕ ತಪಾಸಣೆಗೆ ಒಳಪಡಲು ಹಿಂದೇಟು ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ.
ಸೋಮವಾರ ಸಂಜೆ 7.40ರ ವೇಳೆಗೆ ನಡೆದ ಈ ಘಟನೆ ನಂತರ ಶಂಕಾಸ್ಪದ ವ್ಯಕ್ತಿಗಾಗಿ ನಗರ ಪೋಲೀಸರು ತೀವ್ರ ಶೋಧ ನಡೆಸಿದ್ದಾರೆ. ಅಲ್ಲದೆ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಡನೆ ಮಾತನಾಡಿರುವ ಪಶ್ಚಿಮ ವಿಭಾಗದ ಡಿಸಿಪಿ ರವಿ.ಡಿ ಚೆನ್ನಣ್ಣನವರ್,"ಮೆಟ್ರೋ ನಿಲ್ದಾಣದ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆದಿದೆ. ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿ ಮತ್ತೆ ಹಿಂತಿರುಗಿದ್ದೇಕೆ ಎಂಬುದು ಗೊತ್ತಿಲ್ಲ. ಶಂಕಾಸಪದ ವ್ಯಕ್ತಿಗಾಗಿ ಶೋಧ ಕಾರ್ಯ ನಡೆದಿದೆ" ಎಂದಿದ್ದಾರೆ.
SCROLL FOR NEXT