ರಾಜ್ಯ

ಚಿಕ್ಕಬಳ್ಳಾಪುರದಲ್ಲಿ ಹಸಿವು ತಾಳಲಾಗದೆ ಮಣ್ಣು ತಿಂದು ಮೃತಪಟ್ಟ ಬಾಲಕಿ; ಜಿಲ್ಲಾಡಳಿತಕ್ಕೆ ಇನ್ನೂ ಸಿಕ್ಕಿಲ್ಲ ಪೋಷಕರ ವಿವರ

Sumana Upadhyaya
ಚಿಕ್ಕಬಳ್ಳಾಪುರ: ಹಸಿವೆಯಿಂದ ಮಣ್ಣು ತಿಂದು ಮೃತಪಟ್ಟ ಏಳು ವರ್ಷದ ಮಗು ವೆನೆಲ್ಲಾಳ ಪೋಷಕರಾದ ಮಹೇಶ್ ಮತ್ತು ನಾಗಮಣಿಯ ವಿವರ ಪತ್ತೆ ಹಚ್ಚಲು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಮಗುವಿನ ಹಿರಿಯರು ನೆರೆಯ ಆಂಧ್ರ ಪ್ರದೇಶದಲ್ಲಿ ನೆಲೆಸಿದ್ದು ಅವರು ಹೇಳುವ ಪ್ರಕಾರ ಕುಟುಂಬದವರು ಕರ್ನಾಟಕ ಸರ್ಕಾರದ ಯಾವುದೇ ಸೌಲಭ್ಯ ಅಥವಾ ಇಲ್ಲಿನ ಮತದಾನ ಗುರುತು ಪತ್ರ ಹೊಂದಿಲ್ಲ ಎಂದು ತಮ್ಮ ತನಿಖೆ ವೇಳೆ ತಿಳಿದುಬಂದಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ ಅನಿರುದ್ಧ ಶ್ರಾವಣ್ ತಿಳಿಸಿದ್ದಾರೆ.
ಅಲ್ಲದೆ ಮಗುವಿನ ಪೋಷಕರು ಅಲ್ಲಿ ವಾಸಿಸುತ್ತಿದ್ದರೇ, ಅವರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗದು ಎಂದು ಚಿಕ್ಕಬಳ್ಳಾಪುರದ ಗುಡಿಬಂಡೆಯ ಗ್ರಾಮಸ್ಥರು ಕೂಡ ಹೇಳುತ್ತಾರೆ. ಪೋಷಕರು ಬಹುಶಃ ಬೇರೆ ಕಡೆಯಿಂದ ಇಲ್ಲಿಗೆ ವಲಸೆ ಬಂದಿರಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು ಅದನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
SCROLL FOR NEXT