ಅರುಣ್ ನಂದಿಹಳ್ಳಿ 
ರಾಜ್ಯ

ಮಾಜಿ ಶಾಸಕರ ಪುತ್ರ ಅರುಣ್ ನಂದಿಹಳ್ಳಿ ಸಾವಿನ ಪ್ರಕರಣ ಬೇಧಿಸಿದ ಬೆಳಗಾವಿ ಪೊಲೀಸರು

ಮಾಜಿ ಶಾಸಕ ಪರಶುರಾಮ್ ನಂದಿಹಳ್ಳಿ ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ...

ಬೆಳಗಾವಿ: ಮಾಜಿ ಶಾಸಕ ಪರಶುರಾಮ್  ನಂದಿಹಳ್ಳಿ  ಸಾವಿನ ಪ್ರಕರಣವನ್ನು ತನಿಖಾ ತಂಡ ಭೇಧಿಸಿದೆ, ಆಕಸ್ಮಿಕವಾಗಿ ಅರುಣ್ ತಮ್ಮನ್ನು ತಾವೇ ಕೊಂದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅರುಣ್ ನಂದಿಹಳ್ಳಿ ಸಾವು ಕೊಲೆ ಅಥವಾ ಆತ್ಮಹತ್ಯೆಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ, ಮಾರ್ಚ್ 19 ರಂದು ಅರುಣ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಮೊದಲು ಅರುಣ್ ಸಾವು ಕೊಲೆ ಎಂದು ಭಾವಿಸಲಾಗಿತ್ತು, ಹೀಗಾಗಿ ಬೆಳಗಾವಿಯಲ್ಲಿ ಉದ್ವಿಘ್ನ ವಾತಾವಾರಣ ಮೂಡಿತ್ತು.
ಪ್ರಕರಣ ಬೇಧಿಸಲು ಪೊಲೀಸರ ಮೇಲೆ ಒತ್ತಡವಿತ್ತು, ಆದರೆ ತಿಂಗಳು ಕಳೆದರು ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ, ಸುಮಾರು 150 ಕ್ಕೂ ಹೆಚ್ಚು ಮಂದಿಯನ್ನು ಪ್ರಶ್ನಿಸಲಾಗಿತ್ತು, ಆದರೆ ಯಾವುದೇ ಸುಳಿವು ಸಿಗಲಿಲ್ಲ, ಹಾಗಾಗಿ ಪೊಲೀಸರು ಮತ್ತೊಮ್ಮೆ ಹೊಸದಾಗಿ ತನಿಖೆ ಆರಂಭಿಸಿದ್ದರು.
ತನ್ನ ಭುಜಕ್ಕೆ ಗುಂಡು ಹಾರಿಸಿಕೊಳ್ಳುವಾಗ ಆಯತಪ್ಪಿ ತಮ್ಮನ್ನು ತಾವೇ ಶೂಟ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಅರುಣ್ ಎರಡನೇ ಪತ್ನಿ ಗೀತಾ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನ ಬಂದು ವಿಚಾರಣೆ ನಡೆಸಿದ್ದಾರೆ, ಆಕೆಯ ಸಹೋದರ ಮೋಹನ್  ಜೊತೆ ಪೊಲೀಸರು ಮಾತನಾಡಲು ಪ್ರಯತ್ನಿಸಿದ್ದಾರೆ, ಆದರೆ ತನ್ನ ಸಹೋದರ ಮುಗ್ದ ಎಂದು ಆಕೆ ತಿಳಿಸಿದ್ದಾರೆ,  ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಎಲ್ಲಾ ವಿಷಯ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ